8 ವರ್ಷಗಳ ಹಿಂದೆ ಅದ್ಭುತ ಕ್ಯಾಚ್ ಹಿಡಿದೆ: ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭ ಹಾರೈಸಿದ ಸೂರ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಸೂರ್ಯಕುಮಾರ್ ಯಾದವ್ ಅವರು ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವನ್ನು ಪತ್ನಿ ದೇವಿಶಾ ಶೆಟ್ಟಿ ಜತೆ ಆಚರಿಸಿಕೊಂಡಿದ್ದಾರೆ.

ಈ ವೇಳೆಸೂರ್ಯಕುಮಾರ್​ ಅವರು ಪತ್ನಿಗೆ ಶುಭ ಹಾರೈಸಿರುವ ಪೋಸ್ಟ್​ ವೈರಲ್​ ಆಗಿದೆ.

ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್​ ಯಾದವ್ ಅದ್ಭುತ ಕ್ಯಾಚ್​ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಕ್ಯಾಚ್​ ಅನ್ನು ಸೂರ್ಯಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆಯ ವೇಳೆಯೂ ಬಳಸಿಕೊಂಡಿದ್ದಾರೆ. ‘ಆ ಕ್ಯಾಚ್‌ ಹಿಡಿದು 8 ದಿನಗಳು ಕಳೆದಿವೆ. ಆದರೆ ನನ್ನ ಪ್ರಮುಖ ಕ್ಯಾಚ್ 8 ವರ್ಷಗಳ ಹಿಂದೆ ಹಿಡಿದದ್ದು!’ ಎಂದು ಬರೆದುಕೊಳ್ಳುವ ಮೂಲಕ ಪತ್ನಿಗೆ ವಿವಾಹ ವಾರ್ಷಿಕೋತ್ಸದ ಶುಭ ಹಾರೈಸಿದ್ದಾರೆ.

ಸದ್ಯ ಸೂರ್ಯ ಅವರು ಈ ಪೋಸ್ಟ್​ ವೈರಲ್ ಆಗಿದೆ. ಜುಲೈ 7, 2016ರಲ್ಲಿ ಸೂರ್ಯ ಮತ್ತು ದೇವಿಶಾ ವಿವಾಹವಾಗಿದ್ದರು. ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!