ದೇಹದ ತಂಪಿಗೆ ಈ ಬೀಜ ಉಪಕಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಷ್ಣ ಶರೀರ ಪ್ರಕೃತಿಯವರಿಗೆ ಈ ಬೀಜದ ಪಾನೀಯ ಬಹು ಉಪಯುಕ್ತ. ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತವಾಗಿರಬೇಕೆಂದರೆ ಈ ಬೀಜದ ಪಾನೀಯ ಬಳಸುವುದು ಲೇಸು. ಹಾಗಾದರೆ ಅಂತಹ ಅದ್ಭುತ ಶಕ್ತಿಹೊಂದಿದ ಬೀಜ ಯಾವುದು…? ಅದರ ಶಕ್ತಿ ಏನು? ನೋಡೋಣವೇ…?

ಕಾಮ ಕಸ್ತೂರಿ ಬೀಜ ಎಂದೇ ಜನಪ್ರಿಯವಾಗಿರುವ ಈ ಬೀಜ ಆರೋಗ್ಯವರ್ಧಕವೂ ಹೌದು. ಕಪ್ಪು ಬಣ್ಣದ ಸಣ್ಣ ಬೀಜ ಅನೇಕ ರೋಗಗಳಿಗೆ ರಾಮಬಾಣ. ದೇಹದಲ್ಲಿರುವ ಹೆಚ್ಚಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಚರ್ಮದ ಕಾಂತಿಯನ್ನು ಹಾಗೂ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಎರಡು ಟೀ ಚಮಚ ಕಾಮಕಸ್ತೂರಿ ಬೀಜವನ್ನು ಒಂದು ಕಪ್ ನೀರಿನೊಂದಿಗೆ ಹದಿನೈದು ನಿಮಿಷಗಳ ಕಾಲ ನೆನೆಯಲು ಬಿಡಿ. ಬೀಜಗಳು ಉಬ್ಬುವುದರ ಜೊತೆಗೆ ತನ್ನ ಸುತ್ತಲೂ ಒಂದು ವಲಯವನ್ನು ಸೃಷ್ಟಿಸಿ ಅತ್ಯಂತ ಆಕರ್ಷಕವಾಗಿ ಪರಿವರ್ತನೆಯಾಗುತ್ತದೆ. ಈ ನೆನೆದ ಬೀಜಗಳನ್ನು ಲಿಂಬೆ ಹಣ್ಣಿನ ಶರಬತ್, ಹಾಲು ಸಕ್ಕರೆಯ ಪಾನಕ, ಎಳೆನೀರ ಜ್ಯೂಸ್ ಜೊತೆಗೆ ಸೇರಿಸಿ ಸೇವಿಸುವುದರಿಂದ ರುಚಿಯೂ ಉತ್ತಮವಾಗಿರುತ್ತದೆ, ಆರೋಗ್ಯವೂ ವೃದ್ಧಿಸುತ್ತದೆ.

ಈ ಬೀಜಗಳು ವಿಟಮಿನ್ ಎ, ಇ, ಮತ್ತು ಕೆ ನಂತಹ ವಿಟಮಿನ್ ಹಾಗೂ ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣ ಅಂಶಗಳನ್ನು ಒಳಗೊಂಡಿವೆ. ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಕಾರಿ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಡಯಟ್ ಚಾರ್ಟ್‍ನಲ್ಲಿ ಸೇರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!