ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಹಿನೀರಿನಲ್ಲಿ ಬೆಳೆಯುವ ಒಂದು ನೀಲಿ ಹಸಿರು ಪಾಚಿ ಈ ಸ್ಪಿರುಲಿನಾ. ಉನ್ನತವಾದ ಪೋಷಕಾಂಶಗಳನ್ನು ಸಂಶ್ಲೇಷಿಸುವ ಅದ್ಭುತ ಸಾಮರ್ಥ್ಯ ಹೊಂದಿರುವ ಇದು `ಭವಿಷ್ಯದ ಆಹಾರ’ ಎಂದೇ ವ್ಯಾಖ್ಯಾನಿಸಲ್ಪಡುತ್ತಿದೆ. ಹೆಚ್ಚಿನ ಪ್ರೋಟೀನ್, ಅಗತ್ಯವಾದ ಅಮೈನೋ ಆಮ್ಲಗಳು ಹೇರಳವಾಗಿರುವ ಇದು ದೇಹದ ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದಲ್ಲಿರುವ ಕೊರತೆಗಳನ್ನು ಸರಿದೂಗಿಸಿ ಚಯಾಪಚಯ ಕ್ರಿಯೆಗಳನ್ನು ಪ್ರಚೋದಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ನೈಸರ್ಗಿಕ ರಕ್ಷಣಾ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ.
ಪ್ರೋಟೀನ್‍ಗಳು, ಜೀವಸತ್ವಗಳು,ಖನಿಜಗಳು,ಅಗತ್ಯವಾದ ಕೊಬ್ಬಿನಾಮ್ಲಗಳು, ಅನನ್ಯ ಆಂಟಿ ಆಕ್ಸಿಡೆಂಟ್ ಸೇರಿದಂತೆ ಇನ್ನೂ ಅನೇಕ ರೀತಿಯ ಅಂಶಗಳನ್ನು ಒಳಗೊಂಡಿರುತ್ತದೆ. ವಿವಿಧ ಕಂಪೆನಿಗಳು ಇಂದು ಸ್ಪಿರುಲಿನಾ ಪೂರೈಕೆ ಮಾಡುತ್ತವೆ. ಗುಣಮಟ್ಟ ಖಾತ್ರಿ ಹೊಂದಿರುವ ಸ್ಪಿರುಲಿನಾವನ್ನು ಮಾತ್ರ ಉಪಯೋಗಿಸಿ.