ಹೊಸದಿಗಂತ ಡಿಜಿಟಲ್ ಡೆಸ್ಕ್
ಪೋಲೆಂಡ್‌ನ ಪೊಜ್ನಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಕಾನೊ ವಿಶ್ವಕಪ್‌ನಲ್ಲಿ ಭಾರತದ ಪ್ಯಾರಾಲಿಂಪಿಯನ್ ಪ್ರಾಚಿ ಯಾದವ್ ಮಹಿಳೆಯರ 200 ಮೀ ಕ್ಯಾನೋಯ್ ಸ್ಟ್ರಿಂಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಾ ವಿಶ್ವಕಪ್ ಪದಕ ಗೆದ್ದ ದೇಶದ ಮೊದಲ ಕ್ಯಾನೋಯಿಸ್ಟ್ ಎಂಬ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಗಳಿಸಿದ ಮತ್ತು ಫೈನಲ್ ತಲುಪಿದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಧ್ಯಪ್ರದೇಶದ ಗ್ವಾಲಿಯರ್‌ನ ಪ್ಯಾರಾ- ಕ್ಯಾನೋಯಿಸ್ಟ್ ಪ್ರಾಚಿ, ಮಹಿಳೆಯರ ವಿಎಲ್2 ಕ್ಲಾಸ್ ವಿಭಾಗದ 200 ಮೀ. ಸ್ಪರ್ಧೆಯನ್ನು 1:04.71 ಸೆಕೆಂಡ್ ಗಳಲ್ಲಿ ಮುಗಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಆಸ್ಟ್ರೇಲಿಯಾದ ಸುಸಾನ್ ಸೀಪೆಲ್ ಮತ್ತು ಕೆನಡಾದ ಬ್ರಿಯಾನಾ ಹೆನ್ನೆಸ್ಸಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗಳಿಸಿಕೊಂಡರು.
ಫೈನಲ್‌ನಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ ಸುಸಾನ್1:01.54 ಸೆಕೆಂಡ್ ನಲ್ಲಿ ಓಟಮುಗಿಸಿ ಚಿನ್ನ ಗೆದ್ದರೆ, ಹೆನೆಸ್ಸಿ 1:01.58 ಸೆಕೆಂಡ್ ನಲ್ಲಿ ಓಡಿ ಬೆಳ್ಳಿಗೆ ಪಾತ್ರವಾದರು.