ಅಮೇಜಾನ್‌ ಜಾಗತಿಕ ಉದ್ಯೋಗ ಕಡಿತ: ಭಾರತದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ 1000 ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ ಉದ್ಯೋಗ ಕಡಿತಕ್ಕೆ ಇ ಕಾಮರ್ಸ್‌ ದೈತ್ಯ ಅಮೇಜಾನ್‌ ಮುಂದಾಗಿದ್ದು ತನ್ನ ಜಾಗತಿಕ ವಜಾಗೊಳಿಸುವಿಕೆಯ ಭಾಗವಾಗಿ ಭಾರತದಲ್ಲಿ 1,000 ಉದ್ಯೋಗಿಗಳನ್ನು ಹೊರಹಾಕಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಈ ಹಿಂದೆ ನವೆಂಬರ್‌ ತಿಂಗಳಿನಲ್ಲಿ 10,000 ಉದ್ಯೋಗ ಕಡಿತ ಘೋಷಿಸಿದ್ದ ಅಮೇಜಾನ್‌ ಕಳೆದ ಜನೆವರಿಯಲ್ಲಿ ಆರ್ಥಿಕ ಅನಿಶ್ಚಿತೆತಗಳ ಕಾರಣ ನೀಡಿ ಉದ್ಯೋಗ ಕಡಿತದ ಸಂಖ್ಯೆಯನ್ನು 18 ಸಾವಿರಕ್ಕೆ ಏರಿಸಿರುವುದಾಗಿ ಹೇಳಿತ್ತು. ಇದರ ಭಾಗವಾಗಿ ಭಾರತದಲ್ಲೂ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ.

ಅಮೇಜಾನ್‌ ಭಾರತದಲ್ಲಿ 1 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಉದ್ಯೋಗ ಕಡಿತವು 1 ಶೇಕಡಾದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಸುಮಾರು 1000 ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮಾನವ ಸಂಪನ್ಮೂಲ ವಿಭಾಗ, ವ್ಯವಸ್ಥಾಪಕ ವಿಭಾಗ ಇತ್ಯಾದಿಗಳ ಮೇಲೂ ಉದ್ಯೋಗ ಕಡಿತದ ಛಾಯೆ ಆವರಿಸಿಕೊಂಡಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!