ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ಬಿ.ಆರ್. ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಎಂದು ಕಾಂಗ್ರೆಸ್ ಮುಖಂಡ ಸಯ್ಯದ್ ಅಜ್ಜಂಪೀರ ಖಾದ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಿಗ್ಗಾಂವಿಯಲ್ಲಿಂದು ಆದಿಜಾಂಬವ ಸಮಾಜದ ಸಮಾವೇಶದಲ್ಲಿ ಮಾತನಾಡುವ ವೇಳೆ ಈ ಮಾತನ್ನು ಹೇಳಿದ್ದು, ಇದು ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಅಂಬೇಡ್ಕರ್ ಮುಸ್ಲೀಂ ಧರ್ಮ ಸ್ವೀಕರಿಸಲು ಎಲ್ಲ ಸಿದ್ದತೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬೌದ್ದ ಧರ್ಮ ಸ್ವೀಕರಿಸಿದರು ಎಂದು ನಾನು ಓದಿದ್ದೇನೆ ತಿಳಿದುಕೊಂಡಿದ್ದೇನೆ. ಆದ್ರೆ, ಕೊನೆ ಕ್ಷಣದಲ್ಲಿ ಅಂಬೇಡ್ಕರ್ ಬೌದ್ದ ಧರ್ಮ ಸ್ವೀಕರಿಸಿದರು. ಒಂದು ವೇಳೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ರೆ ದಲಿತರು ಮುಸ್ಲಿಂ ಆಗುತ್ತಿದ್ದರು. ಆರ್.ಬಿ.ತಿಮ್ಮಾಪುರ ಹೋಗಿ ರಹೀಮ್ ಖಾನ್ ಆಗುತ್ತಿದ್ದರು. ಡಾ.ಜಿ.ಪರಮೇಶ್ವರ್ ಹೋಗಿ ಪೀರ್ ಸಾಹೇಬ್ ಆಗುತ್ತಿದ್ರು. ಎಲ್.ಹನುಮಂತಪ್ಪ ಹೋಗಿ ಹಸನ್ ಸಾಬ್ ಆಗುತ್ತಿದ್ದರು ಹೇಳಿದರು.
ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಮಂಜುನಾಥ್ ತಿಮ್ಮಾಪುರ್ ಹೋಗಿ ಬಾಬೂಸಾಬ್ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲಿಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದರು.
ಅಂಬೇಡ್ಕರ್ ಬಗ್ಗೆ ಖಾದ್ರಿ ಅವರು ನೀಡುವ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದ್ದು, ಇದು ಮುಂದೆ ಯಾವ ರೀತಿಯಾಗಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.