ಅಕ್ರಮವಾಗಿ ಸೇರಿಕೊಂಡಿದ್ದ 116 ವಲಸಿಗರನ್ನು ಗಡಿಪಾರು ಮಾಡಿ ಮತ್ತೆ ಚೀನಾಗೆ ಅಟ್ಟಿದ ಅಮೆರಿಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತನ್ನ ದೇಶದಲ್ಲಿದ್ದ ಚೀನಾದ 116 ಮಂದಿ ಅಕ್ರಮ ವಲಸಿಗರನ್ನು ಅಮೆರಿಕ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊರದಬ್ಬಿದೆ!
ಈ ವಲಸಿಗರನ್ನು ವಿಮಾನದ ಮೂಲಕ ಮತ್ತೆ ಸ್ವದೇಶಕ್ಕೆ ಕಳುಹಿಸಲಾಗಿದೆ. ಈ ನಡುವೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಹೋಮ್ಲ್ಯಾಂಡ್ ಕಾರ್ಯದರ್ಶಿ ಅಲೆಜಾಂಡ್ರೊ ಮಯೊರ್ಕಾಸ್, ಕಾನೂನು ಬಾಹಿರ ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರನ್ನು ಗಡೀ ಪಾರು ಮಾಡಲಾಗುತ್ತದೆ. ಇದಕ್ಕಾಗಿ ನಮ್ಮ ವಲಸೆ ಕಾನೂನನ್ನು ಜಾರಿಗೊಳಿಸುತ್ತಿರುತ್ತೇವೆ ಎಂದು ಹೇಳಿದ್ದಾರೆ. ಕಳೆದ ವರ್ಷ ಮೆಕ್ಸಿಕೊ ಮೂಲಕ ಭಾರಿ ಪ್ರಮಾಣದ ಚೀನಾ ವಲಸಿಗರು ಅಮೆರಿಕಕ್ಕೆ ಬಂದಿರುವುದು ಗಮನಕ್ಕೆ ಬಂದಿತ್ತು. ಆದರೆ ಈ ವಲಸಿಗರನ್ನು ಅವರ ದೇಶಕ್ಕೆ ವಾಪಸ್ ಕಳಿಸುವುದು ಅಮೆರಿಕಾಗೆ ಸವಾಲಾಗಿ ಕಾಡಿತ್ತು. ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಅಮೆರಿಕ ಈ ಹೆಜ್ಜೆಯಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!