ಪ್ರಧಾನಿ ಮೋದಿಯ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕಿತ್ತು: ಜೇಮೀ ಡಿಮೋನ್ ಗುಣಗಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಅದ್ವಿತೀಯ ಎನಿಸುವ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ರೂಪಿಸಿದ್ದಾರೆ ಎಂದು ಅಮೆರಿಕದ ಬ್ಯಾಂಕಿಂಗ್ ಸಂಸ್ಥೆ ಜೆಪಿ ಮಾರ್ಗನ್ ಚೇಸ್​ನ ಸಿಇಒ ಜೇಮೀ ಡಿಮೋನ್ (Jamie dimon) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಾಧನೆಗಳ ಗುಣಗಾನ ಮಾಡಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಎಕನಾಮಿಕ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಪಿ ಮಾರ್ಗನ್ ಚೇಸ್​ನ ಸಿಇಒ, ‘ನರೇಂದ್ರ ಮೋದಿ ಭಾರತದಲ್ಲಿ 40 ಕೋಟಿ ಜನರನ್ನು ಬಡತನದಿಂದ ಹೊರಗೆ ತಂದಿದ್ದಾರೆ. 40 ಕೋಟಿ ಜನರಿಗೆ ಶೌಚಾಲಯ ಕೊಟ್ಟಿದ್ದಾರೆ. 70 ಕೋಟಿ ಜನರು ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದ್ದಾರೆ. ನಾವು ಅವರಿಗೆ ಆ ಕೆಲಸ ಮಾಡಿ ಈ ಕೆಲಸ ಮಾಡಿ ಎಂದು ಭೋಧಿಸಲು ಹೋಗುತ್ತಿದ್ದೇವೆ. ಇಂಥ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕಿತ್ತು ಎಂದು ಹೇಳಿದ್ದಾರೆ.

ಈ ಒಬ್ಬ ಮನುಷ್ಯ ಗಟ್ಟಿಯಾಗಿರುವುದರಿಂದ ಇಡೀ ದೇಶ ಮೇಲೇಳುತ್ತಿದೆ. ಹಳೆಯ ಆಡಳಿತಶಾಹಿ ವ್ಯವಸ್ಥೆಯನ್ನು ಮುರಿಯುವ ಗಟ್ಟಿತನ ಮೋದಿ ತೋರಿದ್ದಾರೆ. ಅಮೆರಿಕಕ್ಕೆ ಇದರಲ್ಲಿ ಸ್ವಲ್ಪವಾದರೂ ಬರಬೇಕುಎಂದು ಸಿಇಒ ಜೇಮೀ ದಿಮೋನ್ ತಿಳಿಸಿದ್ದಾರೆ.

ಭಾರತದ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನೂ ಕೊಂಡಾಡಿದ ಅವರು,‘ಪ್ರತಿಯೊಬ್ಬ ನಾಗರಿಕನನ್ನು ಕೈಯಿಂದಾಗಲೀ, ಕಣ್ಣಿಂದಾಗಲೀ ಅಥವಾ ಬೆರಳಿಂದಾಗಲೀ ಗುರುತಿಸಲಾಗುತ್ತಿದೆ. 70 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ. ಅವರು ಆನ್ಲೈನ್​ನಲ್ಲಿ ಸುಲಭವಾಗಿ ಹಣ ಪಾವತಿಸಬಲ್ಲುರು ಎಂದು ಅಮೆರಿಕದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಜೆಪಿ ಮಾರ್ಗನ್ ಚೇಸ್​ನ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!