ಮತದಾನಕ್ಕಾಗಿ ರ್‍ಯಾಪಿಡೋ ವತಿಯಿಂದ ಉಚಿತ ಪ್ರಯಾಣ: ಯಾರಿಗೆಲ್ಲ ಸಿಗಲಿದೆ ಈ ಸೇವೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಏಪ್ರಿಲ್​ 26ರಂದು ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ .

ಈ ಹಿನ್ನೆಲೆ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರ್‍ಯಾಪಿಡೋ ಸಂಸ್ಥೆಯೊಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

ಅದರಂತೆ ರ್‍ಯಾಪಿಡೋ ಮತದಾನದ ದಿನದಂದು ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ವಿಕಲಾಂಗರಿಕಗೆ ಮತ್ತು ಹಿರಿಯ ನಾಗರೀಕರಿಗೆ ಉಚಿತ ಸೇವೆ ನೀಡಲಿದ್ದು, ಎಲ್ಲರೂ ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರ್‍ಯಾಪಿಡೋ, ಮತದಾನ ಮಾಡಲು ರ್‍ಯಾಪಿಡೋ ಉಪಯೋಗಿಸಿ ಮತಗಟ್ಟೆಗೆ ಹೋಗಿ ಮತದಾನ ಮಾಡಿದೆ ಎಂದು ಹೇಳಿ. ಈ ಸೇವೆಯನ್ನು ಬಳಸಿಕೊಳ್ಳುವ ಹಿರಿಯ ನಾಗರೀಕರು, ವಿಕಲಚೇತನರು VOTENOW ಕೋಡ್​​ ಬಳಸಿಕೊಳ್ಳಬೇಕಾಗುತ್ತದೆ. ರ್‍ಯಾಪಿಡೋದ ಈ ವಿಶೇಷ ಆಫರ್​ಗೆ ಚುನಾವಣಾ ಆಯೋಗದ ಸಹಯೋಗವಿರುವುದಾಗಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ರ್‍ಯಾಪಿಡೋ ಸಹ ಸಂಸ್ಥಾಪಕ ಪವನ್​ ಗುಂಟುಪಲ್ಲಿ, ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರ್‍ಯಾಪಿಡೋ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮತಗಟ್ಟೆ ಹೋಗಿ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಿದೆ. ವಿಕಲಚೇತರು ಹಾಗೂ ಹಿರಿಯರು ಕೂಡ ತಮ್ಮ ಮತದಾನವನ್ನು ಚಲಾಯಿಸಬೇಕು ಎಂದು ನಾವು ಈ ಕಾರ್ಯವನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!