‘ಏರೋ ಇಂಡಿಯಾ 2023’ ದಲ್ಲಿ ಅಮೆರಿಕದ ಅತಿದೊಡ್ಡ ನಿಯೋಗ ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ ಆರಂಭವಾಗಲಿದೆ. ಈ ಬಾರಿ ಏರ್ ಶೋ ವಿಭಿನ್ನವಾಗಿರಲಿದ್ದು, ಅಮೆರಿಕದ ಅತಿದೊಡ್ಡ ನಿಯೋಗ ಶೋನಲ್ಲಿ ಭಾಗಿಯಾಗಲಿದೆ.

ಅಮೆರಿಕ ಸೇನಾಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ಏರೋ ಇಂಡಿಯಾ-2023 ಯಲ್ಲಿ ಭಾಗಿಯಾಗಲಿವೆ.

ಬಹುಮುಖ್ಯವಾಗಿ ಯುಎಸ್ ಮಿಷನ್‌ನ ಚಾರ್ಜೆ ಡಿ ಅಫೇರ‍್ಸ್ ಅಂಬಾಸಡರ್ ಎಲಿಜಬೆತ್ ಜೋನ್ಸ್ ಅವರು ಶೋನಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಅಮೆರಿಕ ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು ಈ ಬಾರಿ ಏರ್‌ಶೋನಲ್ಲಿ ಇರಲಿವೆ.

ಅತ್ಯುತ್ತಮ ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅಮೆರಿಕ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ಹೆಮ್ಮೆಯಾಗುತ್ತಿದೆ ಎಂದು ಜೋನ್ಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!