ಭಾರತವನ್ನು ತೊರೆದ ಅಲಿಬಾಬಾ: ಪೇಟಿಎಂ ನಲ್ಲಿನ ಎಲ್ಲಾ ಪಾಲು ಮಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ಹೆಸರುಗಳಿಸಿರುವ ಚೀನಾದ ವ್ಯಾಪಾರ ಸಮೂಹ ʼಅಲಿಬಾಬಾ ಗ್ರುಪ್‌ʼ ಇದೀಗ ಭಾರತದಲ್ಲಿನ ತನ್ನ ಎಲ್ಲಾ ಹೂಡಿಕೆಗಳನ್ನು ಹಿಂಪಡೆಯುವ ಮೂಲಕ ಭಾರತವನ್ನು ತೊರೆದಿದೆ. ಚೀನಾ ಅಪ್ಲಿಕೇಷನ್‌ ಗಳನ್ನು ಕೇಂದ್ರ ಸರ್ಕಾರವು ಬಹಿಷ್ಕರಿಸಿರುವುದರಿಂದ ತನ್ನೆಲ್ಲಾ ಭಾರತೀಯ ಉದ್ಯೋಗಿಗಳನ್ನು ಹೊರಹಾಕಿ ಭಾರತವನ್ನು ತೊರೆಯುತ್ತಿರುವುದಾಗಿ ಚೀನಾ ಮೂಲದ ಟಿಕ್‌ ಟಾಕ್‌ ನಿನ್ನೆಯಷ್ಟೇ ಹೇಳಿತ್ತು. ಇದರ ಬೆನ್ನಲ್ಲೇ ಅಲಿಬಾಬಾ ಗ್ರುಪ್‌ ಭಾರತದ ಉದ್ದಿಮೆಗಳಲ್ಲಿನ ತನ್ನ ಹೂಡಿಕೆಗಳನ್ನು ಹಿಂಪಡೆದಿದೆ.

ಚೀನಾದ ಬಹುರಾಷ್ಟ್ರೀಯ ಕಂಪನಿ ಅಲಿಬಾಬಾ ಭಾರತೀಯ ಮೂಲದ ಉದ್ದಿಮೆಯಾದ Paytm ನಲ್ಲಿ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಿದೆ. ಈ ಹಿಂದೆ ಜನವರಿ ತಿಂಗಳಲ್ಲಿ ಅಲಿಬಾಬಾ ತನ್ನ ಬಳಿಯಿದ್ದ 6.26 ಶೇಕಡಾ ಇಕ್ವಿಟಿಗಳಲ್ಲಿ 3.1 ಶೇಕಡಾವನ್ನು ಮಾರಾಟ ಮಾಡಿತ್ತು. ಇದೀಗ ಮತ್ತೊಮ್ಮೆ ಉಳಿದೆಲ್ಲಾ ಷೇರುಗಳನ್ನು ಮಾರಾಟ ಮಾಡಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದೆ. ಜೊಮಾಟೋ , ಬಿಗ್‌ಬಾಸ್ಕೆಟ್‌ ಗಳಲ್ಲಿಯೂ ಪಾಲು ಹೊಂದಿದ್ದ ಅಲಿಬಾಬಾ ಈ ಹಿಂದೆ ಇವುಗಳಲ್ಲಿನ ಈಕ್ವಿಟಿಯನ್ನೂ ಮಾರಾಟ ಮಾಡಿತ್ತು. ಪ್ರಸ್ತುತ ಪೇಟಿಎಂ ಮಾರಾಟವು ಮಾರುಕಟ್ಟೆಯಿಂದ ಅದರ ನಿರ್ಗಮನವನ್ನು ಖಚಿತಪಡಿಸಿದೆ.

ಅಲಿಬಾಬಾದ ನಿರ್ಗಮನದಿಂದಾಗಿ ಸ್ವದೇಶಿ ನಿರ್ಮಿತ ಪೇಟಿಎಂ ಈಗ ಚೀನಾ ಪಾಲುದಾರಿಕೆಯಿಂದ ಮುಕ್ತವಾಗಿದ್ದು ಇದು ಮಾರುಕಟ್ಟೆಯಲ್ಲಿ ಉತ್ಸಾಹಕರ ವಾತಾವರಣವನ್ನು ಸೃಷ್ಟಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!