ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಚಹಾಲ್ ಮತ್ತವರ ಪತ್ನಿ ಧನಶ್ರೀ ವರ್ಮಾ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ಇದು ಡಿವೋರ್ಸ್ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇನ್ನು ಚಹಾಲ್ ಧನಶ್ರೀ ಜತೆಗಿನ ಎಲ್ಲಾ ಫೋಟೋಸ್ ಡಿಲೀಟ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮ್ ಇದರ ಮಧ್ಯೆ ಸ್ಟಾರ್ ಪ್ಲೇಯರ್ ಚಹಾಲ್ ಇನ್‌ಸ್ಟಾಗ್ರಾಮ್ ಸ್ಟೋರಿ ಭಾರೀ ವೈರಲ್ ಆಗಿದೆ.
ಚಹಾಲ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೇನಿದೆ?
ಕಠಿಣ ಪರಿಶ್ರಮವೇ ಜನರ ನಡವಳಿಕೆ ಬಗ್ಗೆ ಹೇಳುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿಮ್ಮ ನೋವು ನಿಮಗೆ ಗೊತ್ತಿದೆ. ಇಲ್ಲಿಗೆ ತಲುಪಲು ನೀವು ಏನೆಲ್ಲಾ ಮಾಡಿದ್ದೀರಿ ಎಂಬುದು ಗೊತ್ತಿದೆ. ನೀವು ಎಲ್ಲಿದ್ದೀರಿ ಎಂಬುದು ಇಡೀ ಜಗತ್ತಿಗೆ ಗೊತ್ತು. ನಿಮ್ಮ ತಂದೆ ತಾಯಿ ಹೆಮ್ಮೆ ಪಡುವಂತೆ ಮಾಡಲು ಬೆವರನ್ನೇ ಹರಿಸಿದ್ದೀರಿ. ಸದಾ ಪೋಷಕರ ಹೆಮ್ಮೆಯ ಮಗನಾಗಿ ಇರಿ ಎಂದು ಚಹಾಲ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಸ್ಟಾರ್ ಜೋಡಿ ಡಿವೋರ್ಸ್ ವಿಚಾರ ಸದ್ದು ಮಾಡುತ್ತಿರೋದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫೋಲೋ ಮಾಡಿದ್ದರು. ಆಗಲು ಡಿವೋರ್ಸ್ ವಿಚಾರ ಸದ್ದು ಮಾಡಿತ್ತು. ಈ ಸ್ಟಾರ್ ಜೋಡಿ 2020ರಲ್ಲಿ ವಿವಾಹವಾಗಿದ್ದರು.