ಹೊಸದಿಗಂತ ಡಿಜಿಟಲ್ ಡೆಸ್ಕ್ :
ಈಶಾನ್ಯ ಭಾರತದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಿಜೋರಾಂನ 7 ವರ್ಷದ ಬಾಲಕಿ, ಅದ್ಭುತ ಹಾಡುಗಾರ್ತಿ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರಿಗೆ ಸಂಗೀತ ಸಾಧನ ಗಿಟಾರ್ ಅನ್ನು ಉಡುಗೊರೆಯಾಗಿ ನೀಡಿದರು.
ಈ ಕುರಿತು ಪೋಸ್ಟ್ ಮಡಿಉರ್ವ ಶಾ , ಭಾರತದ ಮೇಲಿರುವ ಪ್ರೀತಿ ನಮ್ಮೆಲ್ಲರನ್ನೂ ಒಂದು ಮಾಡುತ್ತಿದೆ. ಮಿಜೋರಾಂನ ಐಜ್ವಾಲ್‌ನಲ್ಲಿ ವಂಡರ್ ಕಿಡ್ ಎಸ್ತರ್ ಲಲ್ದುಹವ್ಮಿ ಹಮ್ಟೆ ಅವರ ಸಿರಿಕಂಠದಲ್ಲಿ ಮೂಡಿಬಂದ ವಂದೇ ಮಾತರಂ ಹಾಡಿಗೆ ಬೆರಗಾದೆ. ಏಳು ವರ್ಷದ ಬಾಲಕಿಗೆ ಭಾರತ ಮಾತೆಯ ಮೇಲಿರುವ ಪ್ರೀತಿ ಹಾಡಿನಲ್ಲಿ ವ್ಯಕ್ತವಾಗುತ್ತದೆ. ಆಕೆಯ ಹಾಡು ಕೇಳುವುದೇ ಒಂದು ಅದ್ಭುತ ಅನುಭವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಾಲಕಿ, ಅಮಿತ್ ಶಾ ಉಪಸ್ಥಿತರಿದ್ದ ವೇದಿಕೆಯಲ್ಲಿ ‘ವಂದೇ ಮಾತರಂ’ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.
ಮಿಜೋರಾಂನ ಅದ್ಭುತ ಗಾಯಕಿಯಾಗಿ ಬೆಳೆಯುತ್ತಿರುವ ಪ್ರತಿಭೆ. 2020ರಲ್ಲಿ ‘ಮಾ ತುಜೇ ಸಲಾಂ’ ಮೂಲಕ ಮೊಟ್ಟ ಮೊದಲ ಬಾರಿ ದೇಶಾದ್ಯಂತ ಜನಪ್ರಿಯತೆ ಗಳಿಸಿದರು. ಆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಕೆಯ ವಿಭಿನ್ನ ಕಂಠಸಿರಿ, ಭಾವಪರವಶತೆ, ಹಾಡಿನಲ್ಲಿ ಬೆರೆತ ದೇಶಭಕ್ತಿ ಮೆಚ್ಚುಗೆ ಗಳಿಸಿತ್ತು. ಇದಾದ ನಂತರ ಬಾಲಕಿಗೆ ಮಣಿಪುರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿತು. ರಾಜ್ಯಪಾಲರಿಂದಲೂ ವಿಶೇಷ ಮೆಚ್ಚುಗೆ ಗಳಿಸಿದ್ದರು.