ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಲಾ, ಊಬರ್ ರೀತಿಯಲ್ಲಿ ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಘೋಷಣೆ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ.
ಈ ಸೇವೆಯ ಎಲ್ಲಾ ಬೆನಿಫಿಟ್‌ಗಳು ನೇರವಾಗಿ ಚಾಲಕರಿಗೆ ಸಿಗಲಿದೆ. ಹಾಗೂ ಮುಂಬರುವ ದಿನಗಳಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸಹಕಾರಿ ಟ್ಯಾಕ್ಸಿ ಸೇವೆ ಅಡಿಯಲ್ಲಿ ದ್ವಿಚಕ್ರ ವಾಹನವನ್ನೂ ಕೂಡ ಅದರಲ್ಲಿ ಟ್ಯಾಕ್ಸಿಯಾಗಿ ರಿಜಿಷ್ಟ್ರೇಷನ್ ಮಾಡಿಕೊಳ್ಳಬಹುದು. ರಿಕ್ಷಾ, ಕಾರ್‌ನಂಥ ವಾಹನಗಳನ್ನು ಅದರಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದರ ಯಾವುದೇ ಲಾಭಗಳು ಮೂರನೇ ವ್ಯಕ್ತಿಯ ಪಾಲಾಗೋದಿಲ್ಲ. ಅದು ನೇರವಾಗಿ ಚಾಲಕನ ಕಿಸೆಗೆ ಸೇರಲಿದೆ. ಅದರೊಂದಿಗೆ ಸಹಕಾರಿ ವಿಮೆ ಕೂಡ ಶೀಘ್ರದಲ್ಲಿಯೇ ಬರಲಿದೆ ಎಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ.