ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಾವೇರಿದೆ. ಪ್ರಚಾರಕ್ಕೆ ಆಗಮಿಸಿದ ಮಹಾ ವಿಕಾಸ್ ಅಘಾಡಿ ಕೇಂದ್ರ ನಾಯಕರು, ಮಾಜಿ ಸಿಎಂ ಉದ್ಧವಾ ಠಾಕ್ರೆ ಸೇರಿದಂತೆ ಹಲವರ ವಾಹನವನ್ನು ಚುನಾವಣಾ ಅಧಿಕಾರಿಗಳು ನಡೆಸಿದ ಪರಿಶೋಧನೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರನ್ನು ಚುನಾವಣಾ ಆಯೋಗ ಪರಿಶೋಧಿಸಿದೆ. ಬಿಜೆಪಿ ನ್ಯಾಯಸಮ್ಮತ ಚುನಾವಣೆಯಲ್ಲಿ ನಂಬಿಕೆ ಇಟ್ಟಿದೆ. ನಿಯಮ ಎಲ್ಲರಿಗೂ ಒಂದೇ ಎಂದು ಅಮಿತ್ ಶಾ ಹೇಳಿದ್ದಾರೆ.
ಪ್ರಚಾರಕ್ಕಾಗಿ ಅಮಿತ್ ಶಾ ಹಿಂಗೂಲಿ ಜಿಲ್ಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಪರಿಶೋಧಿಸಿದ್ದಾರೆ. ಅಮಿತ್ ಶಾ ಹೆಲಿಕಾಪ್ಟರ್ ಒಳಗೆ ಪರಿಶೋಧಿಸಿದ್ದಾರೆ. ಅಮಿತ್ ಶಾ ಹೆಲಿಕಾಪ್ಟರ್ ಪರಿಶೋಧನೆಯನ್ನು ಚುನಾವಣಾ ಅಧಿಕಾರಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳು ನಿಯಮದಂತೆ ಪರಿಶೀಲನೆ ನಡೆಸಿದ ಘಟನೆಯ ವಿಡಿಯೋವನ್ನು ಅಮಿತ್ ಶಾ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡದ್ದಾರೆ. ಇಷ್ಟೇ ಅಲ್ಲ ಈ ಮೂಲಕ ವಿಪಕ್ಷಗಳ ನಾಯಕರಿಕೆ ತಿರುಗೇಟು ನೀಡಿದ್ದಾರೆ.
ಹಿಂಗೋಲಿ ವಿಧಾನಸಭಾ ಕ್ಷೇತ್ರದ ಪ್ರಚಾರಕ್ಕೆ ತೆರಳಿದಾಗ ಚುನಾವಣಾ ಅಧಿಕಾರಿಗಳು ನಾನು ಪ್ರಯಾಣಿಸಿದ ಹೆಲಿಕಾಪ್ಟರ್‌ನ್ನು ಪರಿಶೋಧಿಸಿದ್ದಾರೆ. ಬಿಜೆಪಿ ನ್ಯಾಯಸಮ್ಮತ ಹಾಗೂ ಆರೋಗ್ಯಕರ ಚುನಾವಣೆ ಮೇಲೆ ನಂಬಿಕೆ ಇಟ್ಟಿದೆ. ಹೀಗಾಗಿ ಚನಾವಣಾ ಆಯೋಗ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ. ನಾವು ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಈ ಮೂಲಕ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳ ವಾಹನ, ಬ್ಯಾಗ್ ಪರಿಶೋಧನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇತ್ತೀಚೆಗೆ ಉದ್ದವ್ ಠಾಕ್ರೆ ಗರಂ ಆಗಿದ್ದರು. ಇಷ್ಟೇ ಅಲ್ಲ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಚುನಾವಣಾ ಆಯೋಗ ಅಧಿಕಾರಿಗಳು ಕೇಂದ್ರ ಬಿಜೆಪಿ ಸರ್ಕಾರದ ಸೂಚನೆಯಂತೆ ನಮ್ಮ ವಾಹನ ಪರಿಶೋಧನೆ ಮಾಡುತ್ತಿದೆ. ಒಂದೇ ದಿನ ಮೂರು ಬಾರಿ ವಾಹನ, ಬ್ಯಾಗ್ ಪರಿಶೀಲಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ಧವ್ ಠಾಕ್ರೆ ಹಾಗೂ ಬಣ ಬಿಜೆಪಿ ವಿರುದ್ಧ ಆರೋಪ ಮಾಡಿತ್ತು. ಬಾತ್ ರೂಂಗೆ ಹೋದರೂ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಇಷ್ಟೇ ಅಲ್ಲ ಬಿಜೆಪಿ ನಾಯಕರ ಯಾವುದೇ ವಾಹನ, ಬ್ಯಾಗ್ ಪರಿಶೀಲಿಸುವುದಿಲ್ಲ. ಕೇವಲ ವಿಪಕ್ಷ ನಾಯಕರ ವಾಹನ, ಬ್ಯಾಗ್ ಮಾತ್ರ ಪರಿಶೀಲನೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲೂ ನ್ಯಾಯ ಸಮ್ಮತ ಚುನಾವಣೆ ನೆಡಯವುದು ಅನುಮಾನ ಎಂದು ಆರೋಪಿಸಿದ್ದರು.