ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾನ್ ನ ಮುಚ್ಚಿಂತಲ್ ನಲ್ಲಿರುವ ಶ್ರೀರಾಮಾನುಜಾಚಾರ್ಯರ ಆಶ್ರಮಕ್ಕೆ ಭೇಟಿ ಕೊಡಲಿದ್ದಾರೆ.
ಇಂದು ಆಶ್ರಮದಲ್ಲಿ ರಾಮಾನುಜಾಚಾರ್ಯರ ಜನ್ಮಸಹಸ್ರಾಬ್ದಿ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿನ ಹಲವು ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೆ.5ರಂದು ಪ್ರಧಾನಿ ಮೋದಿ 216 ಅಡಿ ಎತ್ತರದ ಪಂಚಲೋಹದ ಸಮಾನತೆಯ ಪ್ರತಿಮೆಯನ್ನು ಅನಾವರಣ ಮಾಡಿದ್ದು, ಇಂದಿನಿಂದ 108 ದಿವ್ಯ ದೇಶಮ್ ನಲ್ಲಿ ದೇವರ ಪ್ರತಿಷ್ಠಾಪನೆ ನಡೆಯಲಿದೆ.
ಇಂದು ಸಂಜೆ 4:40ಕ್ಕೆ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ನಂತರ ಅಲ್ಲಿಂದ ರಸ್ತೆ ಮಾರ್ಗವಾಗಿ ಮುಚ್ಚಿಂತಲ್ ಬಳಿ ಇರುವ ಗೆಸ್ಟ್ಹೌಸ್ಗೆ ತೆರಳಲಿದ್ದಾರೆ.
ಬಳಿಕ ರಾಮಾನುಜಾಚಾರ್ಯರ ಭವ್ಯ ಮೂರ್ತಿಯ ದರ್ಶನ ಪಡೆದು, ಭಾಷಣ ಮಾಡಲಿದ್ದಾರೆ.