ಅಭಿಷೇಕ್ ಪ್ರತಿಭಾವಂತ ಎಂದು ನಾನು ಭಾವಿಸುವುದಿಲ್ಲ ಎಂದ ತಸ್ಲೀಮಾ ನಸ್ರೀನ್ ಹೇಳಿಕೆಗೆ ತಿರುಗೇಟು ಕೊಟ್ಟ ಅಮಿತಾಬ್ ಪುತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಪುತ್ರ, ನಟ ಅಭಿಷೇಕ್ ಬಚ್ಚನ್ ಕುರಿತು ಲೇಖಕಿ ತಸ್ಲೀಮಾ ನಸ್ರೀನ್ ಅವರ ಟ್ವೀಟ್‌ವೊಂದು ಎಲ್ಲೆಡೆ ವೈರಲ್ ಅಗಿದ್ದು, ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಪುತ್ರನನ್ನು ಎಷ್ಟು ಪ್ರೀತಿಸುತ್ತಾರೆ ಎಂಬ ಬಾಂಗ್ಲಾದೇಶಿ-ಸ್ವೀಡಿಷ್ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದರು.

ಇದೀಗ ನಟ ಅಭಿಷೇಕ್ ಬಚ್ಚನ್ ತಸ್ಲೀಮಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ‘ಖಂಡಿತವಾಗಿಯೂ ನಿಮ್ಮ ಮಾತು ಸರಿಯಾಗಿದೆ ಮೇಡಮ್. ಪ್ರತಿಭೆ ಅಥವಾ ಬೇರೆ ಯಾವ ವಿಷಯದಲ್ಲಾಗಲಿ ಅವರ ಹತ್ತಿರ ಯಾರೂ ಬರಲು ಸಾಧ್ಯವಿಲ್ಲ. ಅವರು ಯಾವಾಗಲೂ ಅತ್ಯುತ್ತಮವಾಗಿಯೇ ಉಳಿಯುತ್ತಾರೆ. ನಾನು ಅತ್ಯಂತ ಹೆಮ್ಮೆಯ ಪುತ್ರ’ ಎಂದು ಹೇಳಿದ್ದಾರೆ.

ತಸ್ಲೀಮಾ ನಸ್ರೀನ್ ಈ ಹಿಂದೆ , ‘ಅಮಿತಾಭ್ ಬಚ್ಚನ್‌ಜೀ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಮಗ ತನ್ನ ಎಲ್ಲಾ ಪ್ರತಿಭೆಯನ್ನು ಪಡೆದಿದ್ದಾನೆ ಮತ್ತು ಅತ್ಯುತ್ತಮ ಎಂದು ಅವರು ಭಾವಿಸುತ್ತಾರೆ. ಅಭಿಷೇಕ್ ಒಳ್ಳೆಯವರು, ಆದರೆ ಅಭಿಷೇಕ್ ಅಮಿತಾಭ್​​ ಅವರಷ್ಟು ಪ್ರತಿಭಾವಂತ ಎಂದು ನಾನು ಭಾವಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದರು.

ದಾಸ್ವಿ ಚಿತ್ರದಲ್ಲಿನ ಅಭಿನಯಕ್ಕಾಗಿ 2022ರ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್‌ನಲ್ಲಿ ವೆಬ್ ಮೂಲ ಚಲನಚಿತ್ರ-ಪುರುಷ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಅಮಿತಾಭ್​​ ಬಚ್ಚನ್ ಅವರ ಮಗನನ್ನು ಹೊಗಳಿದ್ದ ಬೆನ್ನಲ್ಲೇ ನಸ್ರೀನ್ ಈ ಟ್ವೀಟ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!