ಅಮ್ಮಾ ನಗುತ್ತಲೇ ಪ್ರಾಣಬಿಟ್ಟರು.. ಕಣ್ಣೀರಾದ ವಿನೋದ್ ರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಯಿಯ ಜೊತೆಯೇ ಸದಾ ಇದ್ದ ಮಗನಿಗೆ ಅಮ್ಮನನ್ನು ಕಳೆದುಕೊಂಡಾಗ ಇಡೀ ಜಗತ್ತೇ ಕತ್ತಲಾದಂತೆ ಕಾಣಿಸುತ್ತಿದೆ..

ಅಮ್ಮನ ಕಣ್ಣಿನಲ್ಲಿ ಸಂತೃಪ್ತಿ ಇತ್ತು, ನಾನೊಂದು ಒಳ್ಳೆಯ ಜೀವನ ನಡೆಸಿ ಹೋದೆ ಎನ್ನುವ ಬೆಳಕಿತ್ತು. ಅಮ್ಮಾ ಕಣ್ಣು ಬಿಡು ಎಂದು ಕಣ್ಣು ಬಿಟ್ಟು ನನ್ನನ್ನೊಮ್ಮೆ ನೋಡಿದರು. ಕಂದಾ ವಿನು ಎಂದರು. ನಾನು ಅವರ ಬಾಯಿಗೆ ನೀರು ಹಾಕುತ್ತಿದ್ದೆ. ಕುಡಿಯುತ್ತಲೇ ನಗುತ್ತಲೇ ಪ್ರಾಣ ಬಿಟ್ಟರು.

ಅಮ್ಮ ಕಳೆದ ವರ್ಷದಿಂದಲೂ ಸುಸ್ತಾಗಿ ಹೋಗಿದ್ರು ಈ ವರ್ಷದಲ್ಲಿ ಅವರಿಗೆ ಸ್ವಲ್ಪವೂ ಶಕ್ತಿ ಇರಲಿಲ್ಲ. ಅವರಿಗೆ ಪಶು ಆಸ್ಪತ್ರೆಯೇ ಕನಸಾಗಿತ್ತು. ಅವರೆಲ್ಲ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ತೇನೆ. ಅವರ ಕನಸನ್ನು ನನಸು ಮಾಡ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!