ಜಿ-20 ಶೃಂಗಸಭೆ: ಅಮೃತಸರ ಕಲಾವಿದರ ಕುಂಚದಲ್ಲಿ ಅರಳಿತು ʻಜೋ ಬಿಡೆನ್‌ʼ ಭಾವಚಿತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ವರ್ಷ ಭಾರತ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಗಾಗಿ ನವದೆಹಲಿಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಸಭೆಗೂ ಮುನ್ನ  ಅಮೃತಸರ ಮೂಲದ ಕಲಾವಿದರೊಬ್ಬರು ತನ್ನ ಕೈಯಿಂದ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಸ್ವಾಗತಿಸಲು ಅವರ ಭಾವಚಿತ್ರವನ್ನು ರಚಿಸಿದರು.

ಕಲಾವಿದ ಡಾ.ಜಗ್ಜೋತ್ ಸಿಂಗ್ ಅವರ ಕುಂಚದಲ್ಲಿ 7 ಅಡಿ ಉದ್ದ 5 ಅಡಿ ಅಗಲವಿರುವ ವರ್ಣಚಿತ್ರ ರಚನೆಯಾಗಿದ್ದು, ಜೋ ಬಿಟೆನ್‌ ಅವರನ್ನು ಸ್ವಾಗತಿಸಲು ತಯಾರಿ ನಡೆಸಲಾಗಿದೆ.

ರಾಷ್ಟ್ರೀಯ ಸುದ್ದಿಮಾಧ್ಯಮವೊಂದಕ್ಕೆ ಮಾತನಾಡಿದ ಸಿಂಗ್, ʻಜೋ ಬಿಡೆನ್ ಯುಎಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದಾಗ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತ್ತು. ಹಾಗಾಗಿ ಅವರಿಗೂ ನಮ್ಮ ದೇಶದಲ್ಲಿ ವಿಸೇಷವಾದ ಸ್ವಾಗತ್ಕಕಾಗಿ ಈ ಚಿತ್ರ ಬಿಡಿಸಿದ್ದೇನೆʼ ಎಂದರು.

ಅಕ್ರಿಲಿಕ್ ಬಣ್ಣಗಳಿಂದ ಚಿತ್ರಿಸಲಾದ ಯುಎಸ್ ಅಧ್ಯಕ್ಷರ ಭಾವಚಿತ್ರವನ್ನು ಚಿತ್ರಿಸಲು ಹತ್ತು ದಿನಗಳನ್ನು ತೆಗೆದುಕೊಂಡಿತು ಎಂದು ತಿಳಿಸಿದರು. ತಮ್ಮ ಚಿತ್ರಕಲೆ ವೃತ್ತಿಜೀವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಮತ್ತು ಪ್ರತಿಭಾ ಪಟೇಲ್ ಅವರ ಭಾವಚಿತ್ರಗಳನ್ನು ಸಹ ಚಿತ್ರಿಸಿ ಮೆಚ್ಚುಗೆ ಪತ್ರಗಳನ್ನು ಸಹ ಪಡೆದರು.

ಯುಎಸ್ ಅಧ್ಯಕ್ಷ ಜೋ ಬಿಡನ್ ನವದೆಹಲಿಯಲ್ಲಿ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಈ ವಾರ ಭಾರತಕ್ಕೆ ಬರಲಿದ್ದಾರೆ.
ಶೃಂಗಸಭೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನ ಇತ್ತೀಚೆಗೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!