ಅಮೃತಯಾತ್ರೆ: ಜೀವ ಸಂಕುಲದ ರಕ್ಷಣೆಗೆ ಪಣ ತೊಟ್ಟಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಗಾಲ ಹೆಜ್ಜೆ ಕಡಿಮೆ ಮಾಡುವ, ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ. ಅಲ್ಲದೇ ಸಂರಕ್ಷಿತ ಅರಣ್ಯಗಳ ಮೂಲಕ ಪರಿಸರ ಸಂರಕ್ಷಣೆಗೂ ಕೊಡುಗೆ ನೀಡುತ್ತಿದೆ. ಅಂತಹ ಪರಿಸರ ಸಂರಕ್ಷಣೆಯ ಕೊಡುಗೆಗಳಲ್ಲಿ ರಾಮ್ಸರ್‌ ಪ್ರದೇಶಗಳ ಸಂರಕ್ಷಣೆಯೂ ಒಂದು. ಅಮೃತಯಾತ್ರೆಯ ಸಂದರ್ಭದಲ್ಲಿ ದೇಶವು 75 ರಾಮ್ಸರ್‌ ಜೌಗು ಪ್ರದೇಶಗಳನ್ನು ಗುರುತಿಸಿ, ಜೀವಸಂಕುಲದ ಜೀವಾಳವಾದ ಜೌಗು ಪ್ರದೇಶಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.

ನೈಸರ್ಗಿಕ ಪರಿಸರದಲ್ಲಿ ಜೌಗು ಪ್ರದೇಶಗಳು ಅಥವಾ ಆರ್ದ್ರ ಭೂಮಿಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು ಅವುಗಳನ್ನು ಇಡೀ ಪರಿಸರ ವ್ಯವಸ್ಥೆಯ ಜೀವಾಳ ಎನ್ನಲಾಗುತ್ತದೆ. ವಿಶ್ವದ 40 ಶೇಕಡಾಧಷ್ಟು ಸಸ್ಯ ಮತ್ತು ಪ್ರಾಣಿ ಪ್ರಬೇಧಗಳು ಈ ಆರ್ದ್ರ ಭೂಮಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಜೌಗು ಪ್ರದೇಶಗಳು ವಲಸೆ ಹಕ್ಕಿಗಳಿಗೆ ಪ್ರಮುಖ ಆಹಾರ ಮತ್ತು ಸಂತಾನೋತ್ಪತ್ತಿ ಸ್ಥಳಗಳಾಗಿವೆ.

ಹೆಚ್ಚುತ್ತಿರುವ ಪರಿಸರ ನಾಶ, ಮಾಲಿನ್ಯಗಳಿಂದಾಗಿ ಜೀವ ಸಂಕುಲಗಳಿಗೆ ಹಾನಿಯಾಗುತ್ತಿದ್ದು ನಿಸರ್ಗದ ಜೀವಾಳ ವಾಗಿರುವ ಜೌಗು ಪ್ರದೇಶಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಉಳಿಸುವ ದೃಷ್ಟಿಯಿಂದ ಜೌಗು ಪ್ರದೇಶಗಳನ್ನು ರಕ್ಷಿಸಲು 1971ರಲ್ಲಿ ರಾಮ್ಸರ್‌ ಸಮಾವೇಶ ನಡೆಸಲಾಗಿದ್ದು ಭಾರತವೂ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಅಲ್ಲಿಂದೀಚೆ ದೇಶದಲ್ಲಿ ಪ್ರಮುಖ ಜೌಗು ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ರಾಮ್ಸರ್‌ ಜೌಗು ಪ್ರದೇಶಗಳ ಹೆಸರಿನಲ್ಲಿ ಸಂರಕ್ಷಿಸಲಾಗುತ್ತಿದೆ. 1981ರ ಹೊತ್ತಿಗೆ ಭಾರತದಲ್ಲಿ 2 ರಾಮ್ಸರ್‌ ಪ್ರದೇಶಗಳಿದ್ದವು 2022ರ ಹೊತ್ತಿಗೆ 75 ರಾಮ್ಸರ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ರಾಮ್ಸರ್‌ ಪ್ರದೇಶಗಳ ಪಟ್ಟಿಗೆ 49 ಹೊಸ ಜೌಗು ಪ್ರದೇಶಗಳನ್ನು ಸೇರಿಸಲಾಗಿದೆ. ಭಾರತವು 13,26,677 ಹೆಕ್ಟೇರ್‌ ಗಳಲ್ಲಿ ವ್ಯಾಪಿಸಿರುವ 75 ರಾಮ್ಸರ್ ತಾಣಗಳನ್ನು ಹೊಂದಿದೆ. ಆಮೂಲಕ ಜೀವ ಸಂಕುಲದ ಉಳಿವಿಗೆ ಕಟಿಬದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!