ಅಮೃತಯಾತ್ರೆ: ಪ್ರಪಂಚಕ್ಕೇ ಗೋಧಿ ರಫ್ತು ಮಾಡುತ್ತಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಭಾರತವು ಇಂದು ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕನಾಗಿ ಹೊರಹೊಮ್ಮಿದುದರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಕೃಷಿ ಪ್ರಧಾನ ದೇಶವಾಗಿರೋ ಭಾರತದಲ್ಲಿ 60ಶೇಕಡಾದಷ್ಟು ಜನರಿಗೆ ಕೃಷಿಯೇ ಜೀವನಾಧಾರ. ಸ್ವಾತಂತ್ರ್ಯ ಬಂದ ನಂತರ ನೀಡಿದ ಉತ್ತೇಜನದ ಪರಿಣಾಮ ಈ ಸಾಧನೆ ಮಾಡಿದೆಯೆಂದರೆ ತಪ್ಪಾಗಲಾರದು. ಯಾಕೆಂದರೆ ಮುಂಚೆ ಗೋಧಿಯನ್ನು ದೇಶದಲ್ಲಿ ಬೆಳೆಯಲಾಗುತ್ತಿತ್ತಾದರೂ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಹಸಿರು ಕ್ರಾಂತಿ ಈ ನಿಟ್ಟಿನಲ್ಲಿ ಗೋಧಿ ಬೆಳೆಗೆ ಉತ್ತೇಜನ ನೀಡಿದ ಅಂಶಗಳಲ್ಲೊಂದು ಎನ್ನಬಹುದು.

1963-64ರ ಹೊತ್ತಿಗೆ ಒಟ್ಟಾರೆಯಾಗಿ ದೇಶದಲ್ಲಿ 98.5 ಲಕ್ಷ ಟನ್‌ ಗಳಷ್ಟು ಗೋಧಿ ಉತ್ಪಾದನೆಯಾಗುತ್ತಿತ್ತು. ಈ ಸಂಖ್ಯೆ 2000-01ರಲ್ಲಿ 696.8 ಲಕ್ಷ ಟನ್‌ ಗೆ ತಲುಪಿತು. 2021-22ರ ವೇಳೆಗೆ ಒಟ್ಟಾರೆಯಾಗಿ 1068.4 ಟನ್‌ ಗೋಧಿಯನ್ನು ಉತ್ಪಾದಿಸಲಾಗಿಎ. ಅಂದರೆ ಹೆಚ್ಚುಕಡಿಮೆ ಹತ್ತುಪಟ್ಟು ಹೆಚ್ಚು ಉತ್ಪಾದನೆ ದಾಖಲಾಗಿದೆ. ಪಂಜಾಬ್‌, ಹರಿಯಾಣ ರಾಜ್ಯಗಳು ಗೋಧಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಸ್ಥಾನವನ್ನು ಭಾರತ ಗಳಿಸಿದ್ದರೆ, 2021-22ರಲ್ಲಿ 70ಲಕ್ಷ ಟನ್‌ ಗೋಧಿಯನ್ನು ಜಗತ್ತಿಗೆ ಭಾರತ ರಫ್ತು ಮಾಡಿದೆ.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!