ಅಮೃತಯಾತ್ರೆ: ಕಳೆದ ಇಪ್ಪತ್ತು ವರ್ಷಗಳಲ್ಲಿ 10ಪಟ್ಟು ಹೆಚ್ಚಾಗಿದೆ ಭಾರತದ ಜಿಡಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯ ಬಂದು 75 ವರ್ಷಗಳಾಗುವ ಹೊತ್ತಿಗೆ ಜಾಗತಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಭಾರತ. ಭಾರತ ಅಭಿವೃದ್ಧಿ ಹೊಂದುತ್ತಿರೋ ವೇಗವನ್ನು ಗಮನಸಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ಜಾಗತಿಕ ದೊಡ್ಡಣ್ಣನಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

1950ರ ಹೊತ್ತಿಗೆ ಭಾರತದ ಜಿಡಿಪಿಯ ಒಟ್ಟೂ ಮೊತ್ತ ಕೇವಲ 0.1 ಲಕ್ಷಕೋಟಿ ರೂ. ಗಳಷ್ಟಿತ್ತು. ಇದು 2000-01 ನೇ ಆರ್ಥಿಕ ವರ್ಷದಲ್ಲಿ 21.4 ಲಕ್ಷಕೋಟಿ ರೂ.ಗೆ ಏರಿಕೆಯಾಯಿತು. ಪ್ರಸ್ತುತ ಅಂದರೆ 2021-22ರಲ್ಲಿ ಭಾರತದ ಜಿಡಿಪಿಯ ಒಟ್ಟೂ ಮೊತ್ತ 236.7 ಲಕ್ಷಕೋಟಿ ರೂ.ಗಳಿಗೆ ತಲುಪಿದೆ.

2022 ನೇ ಇಸವಿಯ ಹೊತ್ತಿಗೆ ಭಾರತದ ಆರ್ಥಿಕತೆಯು 3 ಟ್ರಿಲಿಯನ್‌ ಡಾಲರ್‌ ನಷ್ಟಕ್ಕೆ ತಲುಪಿದ್ದು ಬ್ರಿಟನ್‌ ಅನ್ನು ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. 2022-23 ರಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 8 ಶೇಕಡಾದಿಂದ 8.5 ಶೇಕಡಾಗೆ ಏರಿಕೆಯಾಗಲಿದೆ ಎಂಬುದನ್ನು 2021ರ ಆರ್ಥಿಕ ಸಮೀಕ್ಷೆ ಹೊರಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!