ಅಮೃತಯಾತ್ರೆ: ಭಾರತದ ʼಚಹಾʼಕ್ಕಿದೆ ಎಲ್ಲಿಲ್ಲದ ಬೇಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ಹೊತ್ತಲ್ಲಿ ಜಗತ್ತಿನೆಲ್ಲೆಡೆ ಭಾರತದ ಚಹಾದ ಘಮಲು ವ್ಯಾಪಿಸಿರೋದರ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ʼಚಹಾʼವನ್ನು ಮೊದಲು ಭಾರತಕ್ಕೆ ಪರಿಚಯಿಸಿದ್ದು ಬ್ರಿಟೀಷರೇ ಎಂಬ ಅಭಿಪ್ರಾಯಗಳು ಇವೆಯಾದರೂ, ಚಹಾ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನ ಗಳಿಸಕೊಳ್ಳುವ ಮೂಲಕ ಭಾರತ ಸಾಧನೆ ಮಾಡಿದೆ.

ಭಾರತದಲ್ಲಿ ಚಹಾ ಬೆಳೆಗೆ ಅಗತ್ಯವಾದ ಪೂರಕ ವಾತಾವರಣವಿದೆ. ಭಾರತದಲ್ಲಿ ಉತ್ಪಾದನೆಯಾಗುವ ಚಹಾ ಗೆ ಎಲ್ಲಿಲ್ಲದ ಬೇಡಿಕೆಯಿದೆ. ಅದರಲ್ಲೂ ಭಾರತದ ʼಅಸ್ಸಾಂ ಟೀʼ ವಿಶ್ವಪ್ರಸಿದ್ಧಿ ಪಡೆದುಕೊಂಡಿದೆ. ಭಾರತದಲ್ಲಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯುವ ಏಕ-ಮೂಲದ (single origin) ಚಹಾವು ಕೆಲ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿಯೇ ಜನರು ಅವುಗಳನ್ನು ನೆಚ್ಚಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಚಹಾ ಉತ್ಪಾದನೆಯು ಏರುತ್ತಲೇ ಸಾಗಿದೆ. ಚಹಾ ಬೆಳೆಗಾರರಿಗೆ ಸರ್ಕಾರವೂ ಉತ್ತೇಜನ ನೀದಡಿದೆ ಪರಿಣಾಮ 1970-71ರ ಸಂದರ್ಭದಲ್ಲಿ 4,190 ಲಕ್ಷ ಕಿಲೋಗಳಷ್ಟಿದ್ದ ಉತ್ಪಾದನೆ ಹಲವುಪಟ್ಟು ಏರಿಕೆಯಾಗಿ 2020-21ರ ಹೊತ್ತಿಗೆ 12,803.3 ಲಕ್ಷ ಕಿಲೋ ಗೆ ತಲುಪಿದೆ. ಇಂದು ಜಗತ್ತಿನ ಎರಡನೇ ಅತಿದೊಡ್ಡ ಚಹಾ ಪೂರೈಕೆದಾರನಾಗಿ ಭಾರತ ಹೊರ ಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!