ಅಮೃತಯಾತ್ರೆ: ಕ್ಯಾಶ್‌ ಲೆಸ್‌ ಆಗುತ್ತಿದೆ ದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುವ ಹೊತ್ತಿಗೆ ದೇಶದಲ್ಲಿ ಡಿಜಿಟಲ್‌ ಪಾವತಿಗಳನ್ನು ಜಾರಿಗೊಳಿಸಿ ಭಾರತೀಯರು ಕ್ಯಾಶ್‌ ಲೆಸ್‌ ಆಗುವಂತೆ ಮಾಡಿದ್ದು ಕೂಡ ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ಸಾಧನೆಗಳಲ್ಲೊಂದು. ಇಂದು ದೇಶದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ಹೈಪರ್‌ ಮಾಲ್‌ ಗಳ ವರೆಗೆ ಎಲ್ಲರೂ ಡಿಜಿಟಲ್‌ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ದುಡ್ಡುಳ್ಳ ದೊಡ್ಡವರಿಗೆ ಮಾತ್ರ ಎಂಬಂತಾಗಿಬಿಟ್ಟಿದ್ದ ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆ ಅತ್ಯಂತ ಸರಳವಾಗಿ ಯುಪಿಐ ರೂಪದಲ್ಲಿ ಜನಸಾಮಾನ್ಯನಿಗೂ ಲಭ್ಯವಾಗಿದೆ.

ಭಾರತವನ್ನು ಕ್ಯಾಶ್‌ ಲೆಸ್‌ ಆಗಿಸುವಲ್ಲಿ ಮೋದಿ ಸರ್ಕಾರ 2016ರಲ್ಲಿ ಜಾರಿಗೆತಂದ ಏಕೀಕೃತ ಪಾವತಿ ವ್ಯವಸ್ಥೆಯಾದ Unified Payments Interface (UPI) ಬಹುದೊಡ್ಡ ಕ್ರಾಂತಿಕಾರಿಕ ಬದಲಾವಣೆಯನ್ನೇ ದೇಶದಲ್ಲಿ ತಂದಿದೆ. ಹಣವನ್ನು ವರ್ಗಾಯಿಸುವ ಮತ್ತು ಸ್ವೀಕರಿಸುವ ಅತ್ಯಂತ ಸುಲಭವಾದ ಮಾರ್ಗವಾಗಿ ಯುಪಿಐ ಬಳಕೆಯಾಗುತ್ತಿದೆ. ಎಲ್ಲಿ ನೋಡಿದರೂ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಗಳೇ ಹಣ ವ್ಯವಹಾರದ ಮಾಧ್ಯಮಗಳಾಗಿ ಹೋಗಿವೆ. ಇನ್ನು ಯುಪಿಐ ಪೂರಕ ವ್ಯವಸ್ಥೆಯಾದ BHIM (Bharat Interface for Money) ಬ್ಯಾಂಕಿಂಗ್‌ ಅನ್ನು ಅತ್ಯಂತ ಸರಳವನ್ನಾಗಿಸಿದೆ. ಪರಿಣಾಮ ಭಾರತವು ಡಿಜಿಟಲ್‌ ಪಾವತಿಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ.

ಭಾರತದಲ್ಲಿ ನಡೆಯುವ 40 ಶೇಕಡಾದಷ್ಟು ಡಿಜಿಟಲ್‌ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತದೆ. ಭಾರತದಲ್ಲಿ 2020ರ ಏಪ್ರಿಲ್‌ ನಲ್ಲಿ 1.51 ಲಕ್ಷ ಕೋಟಿ ರೂಪಾಯಿಗಳಷ್ಟು ಡಿಜಿಟಲ್‌ ಪಾವತಿಗಳು ನಡೆದಿದ್ದವು. ಈ ಪ್ರಮಾಣ 22ರ ನವೆಂಬರ್‌ ತಿಂಗಳ ವೇಳೆ 11.90 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ. ಭಾರತವೀಗ ಡಿಜಿಟಲ್‌ ಪಾವತಿಗಳ ಮೂಲಕ ಕ್ಯಾಶ್‌ ಲೆಸ್‌ ಆಗಿ ಮುಂದುವರೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!