ಅಮೃತಯಾತ್ರೆ: ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಿದ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನಸಂಖ್ಯೆಯೆಂಬುದು ದೇಶವೊಂದಕ್ಕೆ ಅತ್ಯಂತ ಪ್ರಮುಖವಾದದ್ದು. ಹಾಗೆಂದ ಮಾತ್ರಕ್ಕೆ ಅತಿ ಹೆಚ್ಚು ಜನಸಂಖ್ಯೆಯೆಂಬುದು ದೇಶಕ್ಕೆ ಒಳ್ಳೆಯದಲ್ಲ ಎಂಬುದೂ ಕೂಡ ಒಪ್ಪಿಕೊಳ್ಳಬೇಕಾದ ಅಂಶ.ಭಾರತವಿಂದು ಜನಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲಿಯೇ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಇನ್ನೊಂದೆರಡು ವರ್ಷದಲ್ಲಿ ಚೀನಾವನ್ನು ಮೀರಿಸಿ ಮೊದಲನೇ ಸ್ಥಾನಕ್ಕೇರುತ್ತದೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಏರಿಕೆಯನ್ನು ಮಿತಿಗೊಳಿಸಿದ್ದರ ಬಗ್ಗೆಯೂ ನಾವು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಏಕೆಂದರೆ ಭಾರತ ತನ್ನ ಜನಸಂಖ್ಯಾ ಸ್ಪೋಟಕ್ಕೆ ಕಡಿವಾಣ ಹಾಕದೇ ಇದ್ದಿದ್ದರೆ ಇಂದು ಮಿತಿ ಮೀರಿದ ಜನಸಂಖ್ಯೆಯಿಂದ ಭಾರತ ತತ್ತರಿಸಬೇಕಾದ ಪರಿಸ್ಥಿತಿ ಬಂದೊದಗುತ್ತಿತ್ತು.

ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಅಂದರೆ 1951ರಲ್ಲಿ ಜನನದರವು 39.9ರಷ್ಟಿತ್ತು. ಆದರೆ ನಂತರದಲ್ಲಿ ಸರ್ಕಾರವು ತೆಗೆದುಕೊಂಡ ಉಪಕ್ರಮಗಳು ಈ ದರವನ್ನು ಇಳಿಸಲು ಸಹಾಯಕವಾದವು. ಕುಟುಂಬಯೋಜನೆಯಂತಹ ಕ್ರಮಗಳು ಭಾರತದಲ್ಲಿ ಜನಸಂಖ್ಯಾ ಸ್ಪೋಟದ ವೇಗವನ್ನು ಕಡಿಮೆ ಮಾಡಿದವು ಎಂದರೆ ತಪ್ಪಾಗಲಾರದು. ಪರಿಣಾಮ 2020ರ ಹೊತ್ತಿಗೆ ಜನನದರವು 19.5 ಕ್ಕೆ ಬಂದು ತಲುಪಿದೆ.

ಮಿತಿ ಮೀರಿದ ಜನಸಂಖ್ಯೆ ದೇಶವೊಂಕ್ಕೆ ಹೊರೆಯಾಗಬಹುದು. ಸಂಪನ್ಮೂಲಗಳ ಕೊರತೆ ಉಂಟಾಗಬಹುದು. ಹಾಗೆಂದ ಮಾತ್ರಕ್ಕೆ ಅದನ್ನು ಸಂಪೂರ್ಣವಾಗಿ ತಡೆಗಟ್ಟಲೂ ಬಾರದು. ಏಕೆಂದರೆ ಯುವ ಸಮುದಾಯದ ಸಂಖ್ಯೆ ದೇಶಕ್ಕೆ ಅತಿ ಮುಖ್ಯವಾಗುತ್ತದೆ. ಚೀನಾದಂತಹ ದೇಶಗಳು ಜನಸಂಖ್ಯೆಯನ್ನು ಕಟ್ಟಿಹಾಕಲು ಹೋಗಿ ಇಂದು ಯುವ ಸಮುದಾಯವನ್ನೇ ಕಳೆದುಕೊಂಡಿದೆ. ಅರ್ಥಾತ್‌ ಚೀನಾದಲ್ಲಿ ಯುವಕರ ಸಂಖ್ಯೆ ಕಡಿಮೆಯಿದೆ. ಆದರೆ ಭಾರತ ಜನಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದೆಯೇ ವಿನಃ ಅದನ್ನು ತಡೆ ಹಿಡಿಯಲಿಲ್ಲ. ಪರಿಣಾಮ ಯುವ ಸಮುದಾಯದ ಸಂಖ್ಯೆ ಹೆಚ್ಚಿದೆ. ಇದು ದೇಶಕ್ಕಿಂದು ವರವಾಗಿ ಪರಿಣಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!