ಅಮೃತಯಾತ್ರೆ: ಬಾಹ್ಯಾಕಾಶ ಕಾರ್ಯಾಚರಣೆಗಳ ಮೂಲಕ ಭಾರತ ಆಕಾಶವನ್ನು ಆಳ ಹೊರಿಟಿರೋದು ಹೀಗೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಆಕಾಶವನ್ನೇ ಆಕ್ರಮಿಸೋ ಹೊರಟಿರೋ ಭಾರತದ ಬಾಹ್ಯಾಕಾಶ ಸಾಧನೆಯನ್ನು ನೆನಪಿಸಿಕೊಳ್ಳಲೇ ಬೇಕು. ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರೋ ಔನ್ನತ್ಯಕ್ಕೆ ಜಗತ್ತೇ ತಲೆಬಾಗುತ್ತಿದೆ, ಸರ್ಕಾರಿ ಒಂದೇ ಅಲ್ಲದೇ ಖಾಸಗಿಯಾಗಿಯೂ ರಾಕೆಟ್‌ ಉಡಾವಣೆ ಮಾಡುವ ಮೂಲಕ ಭವಿಷ್ಯದ ಬಾಹ್ಯಾಕಾಶ ಉದ್ದಿಮೆಯ ಹೊಸ ಹೊಸ ಸಾಧ್ಯತೆಗಳತ್ತ ತೆರೆದುಕೊಳ್ಳುತ್ತ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ.

ಇಂದು ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಖರೀದಿಸಲು ಜಗತ್ತಿನ ಬಡಾ ಬಡಾ ರಾಷ್ಟ್ರಗಳೇ ಎದುರು ನೋಡುತ್ತಿವೆ. ಭಾರತದ ಕ್ರಯೋಜನಿಕ್‌ ಎಂಜಿನ್ ಗಳಿಗಿರೋ ಸಾಮರ್ಥ್ಯ ಇನ್ನಾವ ದೇಶದ ಬಳಿಯೂ ಇಲ್ಲವೆಂದೇ ಹೇಳಬಹುದು. 2017ರಲ್ಲಿ ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾವಣೆ ಮಾಡಿದ ದಾಖಲೆ ಭಾರತದ್ದು. ಹಾಲಿವುಡ್‌ ಸಿನೆಮಾವೊಂದರ ಬಜೆಟ್ ಗಿಂತಲೂ ಕಡಿಮೆ ವೆಚ್ಚದಲ್ಲಿ ಮಂಗಳನನ್ನು ತಲುಪಿದ ಭಾರತದ ಸಾಮರ್ಥ್ಯಕ್ಕೆ ಜಗತ್ತುಬ ತಲೆದೂಗಿದೆ.

ಈ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ಮಿಷನ್‌ ಗಳು ಸಾಗಿ ಬಂದ ಹಾದಿಯತ್ತಲೂ ಗಮನಹರಿಸಲೇ ಬೇಕು. 1975-85ರ ನಡುವೆ 10 ಬಾಹ್ಯಾಕಾಶ ಮಿಷನ್ ಗಳನ್ನು ಪೂರ್ಣಗೊಳಿಸಿತ್ತು ಭಾರತ. ಹಣಕಾಸಿನ ತೊಂದರೆಯಿಂದ ಸೈಕಲ್ಲಿನ ಮೇಲೆ ಉಪಗ್ರಹದ ಭಾಗಗಳನ್ನು ಸಾಗಿಸಿದ್ದು ಈಗ ಇತಿಹಾಸ. ಆದರೆ ಈಗ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪರಿಸ್ಥಿತಿ ಬದಲಾಗಿದೆ. 2016ರಿಂದ 2022ರ ನಡುವೆ 39 ಮಿಷನ್‌ ಗಳನ್ನು ಪೂರೈಸಿದೆ ಭಾರತದ ಇಸ್ರೋ. ಆ ಮೂಲಕ ದೇಶ ಮತ್ತು ಜನಸಾಮಾನ್ಯನಿಗೆ ಬಾಹ್ಯಾಕಾಶದ ಉಪಯೋಗ ದೊರಕುವಂತೆ ಮಾಡಲು ಶ್ರಮಿಸುತ್ತಿದೆ. ಭಾರತದ ಭಾಹ್ಯಾಕಾಶ ವಿಜ್ಞಾನಿಗಳ ಕೊಡುಗೆಯೂ ಈ ವಿಷಯದಲ್ಲಿ ಸ್ಮರಣೀಯವಾದುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!