ಅಮೃತಯಾತ್ರೆ: ವಸ್ತ್ರೋದ್ಯಮದಲ್ಲಿ ಹೆಚ್ಚಳವಾಗಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೇಳಿಕೊಳ್ಳಲೇ ಬೇಕಾದ ಸಾಧನೆಗಳಲ್ಲಿ ಬಟ್ಟೆ ಉದ್ಯಮದಲ್ಲಿ ದೇಶ ಮುಂದುವರಿದಿದ್ದು ಕೂಡ ಒಂದು. ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ ಭಾರತದ ವಸ್ತ್ರೋದ್ಯಮ ಬ್ರಿಟೀಷರ ಕಪಿಮುಷ್ಟಿಯಲ್ಲಿ ನಶಿಸಿತ್ತು. ಭಾರತದ ರೇಷ್ಮೆ, ಮಕ್ಮಲ್‌ ಬಟ್ಟೆಗಳು ವಿದೇಶಗಳಲ್ಲಿಯೂ ಹೆಸರುಗಳಿಸಿದ್ದವು. ಭಾರತದಲ್ಲಿ ನೇಕಾರ ಸಮುದಾಯವು ನೆಮ್ಮದಿಯಿಂದ ಜೀವಿಸುತ್ತಿತ್ತು. ಆದರೆ ಬ್ರಿಟೀಷರ ಆಡಳಿತದಲ್ಲಿ ನೇಕಾರರನ್ನು ಹತ್ತಿಕ್ಕಿದ ಪರಿಣಾಮ ಬಟ್ಟೆ ಉದ್ಯಮವೂ ಕ್ಷೀಣಿಸಿತ್ತು.
ಭಾರತವು ಹಾವಾಡಿಗರ ದೇಶ ಎಂಬಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಬಿಂಬಿತವಾಗಿತ್ತು. ದೇಶದಲ್ಲಿ ಬಹುತೇಕ ಜನರು ತೊಡಲು ಬಟ್ಟೆಯಿಲ್ಲದೇ ಅರೆ ನಗ್ನರಾಗಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರೋಟಿ, ಕಪಡಾ, ಮಕಾನ್‌ ಇವುಗಳು ಸ್ವಾತಂತ್ರ್ಯ ಸಿಕ್ಕ ಪ್ರಾರಂಭದಲ್ಲಿ ದೇಶದ ಚುನಾವಣಾ ಪ್ರಣಾಳಿಕೆಗಳಾಗಿಬಿಟ್ಟಿದ್ದವು ಎಂದರೆ ತಪ್ಪಾಗಲಾರದು.

ಆದರೆ ಸ್ವಾತಂತ್ರ್ಯದ ನಂತರ ಪರಿಸ್ಥಿತಿ ಬದಲಾಯಿತು. ಭಾರತದಲ್ಲಿ ಹತ್ತಿ ಬೆಳೆಯು ಹೆಚ್ಚಿದಂತೆ ಬಟ್ಟೆಯುದ್ಯಮದಲ್ಲಿಯೂ ದೇಶ ಪ್ರಗತಿ ಸಾಧಿಸಿತು. 1980-81 ಸಮಯದಲ್ಲಿ ಬಟ್ಟೆಗಳ ತಲಾ ಲಭ್ಯತೆ 17.3 ಚದರ್‌ ಮೀಟರ್‌ ಗಳಷ್ಟಿತ್ತು. ಇದು 2019-20 ರ ವೇಳೆಗೆ 51.33 ಚದರ ಮೀಟರುಗಳಷ್ಟಾಗಿದೆ. ಜವಳಿ ಉದ್ಯಮಗಳ ಅಭಿವೃದ್ಧಿಗೆಂದೇ ಭಾರತದಲ್ಲಿ 7 ಪಿಎಂ ಮಿತ್ರ ಪಾರ್ಕ್‌ ಗಳನ್ನು ಸೃಷ್ಟಿಸಲಾಗಿದೆ.

ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯ ಅಡಿಯಲ್ಲಿ ಜವಳಿ ಉದ್ಯಮಕ್ಕೂ ಒತ್ತು ನೀಡಿ ದೇಶೀಯ ಉತ್ಪಾದನೆಗೆ ಪ್ರಾಶಸ್ತ್ಯ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!