ಅಮುಲ್‌ ಹಾಲಿನ ದರ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿ (ಜಿಸಿಎಂಎಂಎಫ್) ಅಮುಲ್ ಹಾಲಿನ ದರವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.

ಪ್ರತಿ ಲೀಟರ್ ಹಾಲಿನ ದರವನ್ನು ₹2ಗೆ ಹೆಚ್ಚಳ ಮಾಡಿ ಆದೇಶಿಸಿದೆ. 2022ರ ಗುಜರಾತ್ ವಿಧಾನಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಅಮುಲ್ ಹಾಲಿನ ಬೆಲೆ ಹೆಚ್ಚಿಸಲಾಗಿದೆ.

ಸಾರಿಗೆ ವೆಚ್ಚದಲ್ಲಿನ ಗಣನೀಯ ಹೆಚ್ಚಳದಿಂದ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿ ಮಾಡಲಾಗಿದೆ ಎಂದು ಜಿಸಿಎಂಎಂಎಫ್ ಮೂಲಗಳು ತಿಳಿಸಿವೆ.

ಹೊಸ ದರಗಳ ಅನ್ವಯ ಮಾರುಕಟ್ಟೆಯಲ್ಲಿ ಅಮುಲ್ ಎಮ್ಮೆ ಹಾಲು ಪ್ರತಿ ಲೀಟರ್‌ಗೆ ₹68, ಅಮುಲ್ ಗೋಲ್ಡ್‌ ₹64, ಅಮುಲ್ ಹಸುವಿನ ಹಾಲು ₹54 ಹಾಗೂ ಅಮುಲ್ ತಾಜಾ ಹಾಲು ₹52 ರಂತೆ ಮಾರಾಟವಾಗಲಿದೆ ಎಂದು ಹೇಳಿದೆ.

ಈ ಬೆಲೆ ಹೆಚ್ಚಳ ಗುಜರಾತ್‌ನಲ್ಲಿ ಮಾತ್ರ ಅನ್ವಯವಾಗಲಿದ್ದು, ಕಳೆದ ಆರು ತಿಂಗಳ ಹಿಂದೆ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಇದ್ದಿದ್ದರಿಂದ ಅಲ್ಲಿ ಬಿಟ್ಟು ದೇಶದ ಉಳಿದ ಕಡೆ ₹5 ಹೆಚ್ಚಳ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!