ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರಿಟಿಗಳ ಹೊಸ ವರ್ಷ ಸಂಭ್ರಮಾಚರಣೆ ಅವರ ಅಭಿಮಾನಿ ಪಾಳಯದಲ್ಲಿ ಯಾವತ್ತಿಗೂ ಒಂದು ಕುತೂಹಲದ ಸಂಗತಿ.
ಈ ಬಾರಿ ಸೆಲೆಬ್ರಿಟಿಗಳು ಎಲ್ಲೆಲ್ಲಿ ಹೊಸವರ್ಷಾಚರಣೆಯಲ್ಲಿ ಮುಳುಗಿದ್ದಾರೆ ಎಂಬ ವರದಿಗಳ ನಡುವೆಯೇ ಮೋಹಕ ತಾರೆ ರಮ್ಯಾ ದೂರದ ಲಂಡನ್‌ನಿಂದ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ರಮ್ಯಾ ಜೊತೆಗೆ ಅಮೃತಾ ಅಯ್ಯಂಗಾರ್ ಅವರೂ ಇದ್ದು, ತಲೆಗೆ ವಿಚಿತ್ರ ವಿಗ್ ಮಾದರಿಯ ಕ್ಯಾಪ್‌ನ್ನು ಹಾಕಿಕೊಂಡಿರುವ ಫೋಟೋಗಳನ್ನು ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.