ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಪರಿಹಾರಕ್ಕೆ ಆಯಪ್: ಇಲ್ಲಿದೆ ನಾಗರಿಕರಿಗೆ ದೂರು ನೀಡಲು ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುವ ಉದ್ದೇಶದಿಂದ ಬಿಬಿಎಂಪಿ,ಅಭಿವೃದ್ಧಿಪಡಿಸಿದ್ದ ‘ಫಿಕ್ಸ್ ಮೈ ಸ್ಟ್ರೀಟ್ ಆಯಪ್’ 2023ರ ಜ.1ರಿಂದ ಮತ್ತೆ ಆರಂಭವಾಗಲಿದೆ.

ಐದು ವರ್ಷಗಳ ಹಿಂದೆ ಪಾಲಿಕೆ ಆಯಪ್ ಅಭಿವೃದ್ಧಿ ಪಡಿಸಿತ್ತು. ಆದ್ರೆ 2019-20ರಲ್ಲಿ ತಾಂತ್ರಿಕ ಕಾರಣದಿಂದ ಸಾರ್ವಜನಿಕರು ಬಳಕೆ ಮಾಡುವುದನ್ನು ಬಿಬಿಎಂಪಿ ನಿಲ್ಲಿಸಿತ್ತು. ಈಗ ಸಾರ್ವಜನಿಕರ ಬಳಕೆ ಅವಕಾಶ ಸಿಗುವುದರಿಂದ ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳು ಮತ್ತು ಗುಣಮಟ್ಟವಲ್ಲದ ರಸ್ತೆಗಳನ್ನು ಭಾವಚಿತ್ರ ತೆಗೆದು ಆಯಪ್‌ನಲ್ಲಿ ಹಾಕಿದ್ದರೆ ವಾರ್ಡ್ ಮಟ್ಟದ ಇಂಜಿನಿಯರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಬಳಿಕ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಲು ನೆರವಾಗಲಿದೆ.

ಸಮಸ್ಯೆ ನಿವಾರಣೆಯಾದ ಬಳಿಕ ದೂರದಾರರ ಮೊಬೈಲ್‌ಗೆ ಚಿತ್ರ ಸಮೇತ ಸಂದೇಶ ರವಾನೆಯಾಗಲಿದೆ.

ಈ ಆಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ರಸ್ತೆಯಲ್ಲಿ ಗುಂಡಿ ಬಿದ್ದರೆ ಸೇರಿ ಏನಾದರೂ ಸಮಸ್ಯೆಗಳಿದ್ದರೆ ಆಯಪ್‌ನಲ್ಲಿ ದೂರು ಸಲ್ಲಿಸಿ ಬಿಬಿಎಂಪಿ ಸೆಳೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!