ಪಿಎಫ್‌ಐ ಕುರಿತು ಹೊರ ಬಿತ್ತು ಆತಂಕಕಾರಿ ಅಂಶ: ಬೇರೆ ಬೇರೆ ಹೆಸರಲ್ಲಿ ಏಜೆನ್ಸಿಗಳ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
PFI ಸ್ಲೀಪರ್ ಸೆಲ್‌ಗಳ ಮೇಲೆ ದೇಶದಾದ್ಯಂತ ಅನೇಕ ದಾಳಿಗಳ ನಡುವೆ ಇಂಡಿಯಾ ಟುಡೆ ಬಿತ್ತರಿಸಿರುವ ವರದಿಯೊಂದು ಆತಂತಕಕಾರಿ ಮಾಹಿತಿಯನ್ನು ಹೊರಹಾಕಿದೆ. PFI ಸರ್ಕಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಕಾರ್ಯಸೂಚಿಯನ್ನು ಹರಡಲು ಅನೇಕ ಜಾಲಗಳನ್ನು ಹರಡುತ್ತಿದ್ದು ಬೇರೇ ಬೇರೆ ಹೆಸರಿನಲ್ಲಿ ಏಜೆನ್ಸಿಗಳನ್ನು ಅದು ಪ್ರಾರಂಭಿಸಿದೆ ಎಂದು ಇಂಡಿಯಾ ಟುಡೆ ವರದಿಯೊಂದು ಬಹಿರಂಗಪಡಿಸಿದೆ. ಈ ಕುರಿತು ನೀಲಿನಕ್ಷೆಯನ್ನು ಬೇಧಿಸಲಾಗಿದೆ ಎಂದು ಅದು ಹೇಳಿಕೊಂಡಿದೆ.

ಏಜೆನ್ಸಿಗಳ ಸಾಲಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ನ್ಯಾಷನಲ್ ವುಮೆನ್ ಫ್ರಂಟ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಆಲ್ ಇಂಡಿಯಾ ಲೀಗಲ್ ಕೌನ್ಸಿಲ್, ರೆಹಬ್ ಇಂಡಿಯಾ ಫೌಂಡೇಶನ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ ಆರ್ಗನೈಸೇಶನ್, ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮತ್ತು ಎಚ್‌ಆರ್‌ಡಿಎಫ್ ಸೇರಿವೆ.

ಇಂಡಿಯಾ ಟುಡೇ ವರದಿಯಲ್ಲಿ ಹೇಳಲಾಗಿರುವಂತೆ ದಾಖಲೆಯು PFI ಸಾಮಾಜಿಕ ಸೇವೆಗಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತದೆ ಮತ್ತು ಸಮಾಜ ವಿರೋಧಿ ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಬಳಸುತ್ತದೆ ಎಂದು ಹೇಳುತ್ತದೆ. ಶಾಲೆಗಳು, ಕಾಲೇಜುಗಳು, ಮದರಸಾಗಳು ಮತ್ತು ಮುಸ್ಲಿಂ ಪ್ರಾಬಲ್ಯದ ಮೊಹಲ್ಲಾಗಳಲ್ಲಿ ನೇಮಕಾತಿ ಡ್ರೈವ್‌ಗಳನ್ನು ನಡೆಸಲಾಗುತ್ತಿದೆ ಎಂದು ಅದು ಉಲ್ಲೇಖಿಸಿದೆ.

ದಾಖಲೆಯ ಪ್ರಕಾರ, ದಕ್ಷಿಣ ಭಾರತದಲ್ಲಿ 200 ಕ್ಕೂ ಹೆಚ್ಚು PFI ಕೇಡರ್‌ಗಳಿಗೆ ತರಬೇತಿ ನೀಡಲಾಗಿದೆ. ಅಲ್ಲದೆ, ಬಡವರು ಮತ್ತು ಭಿಕ್ಷುಕರನ್ನು ಗುರಿಯಾಗಿಸಿಕೊಂಡು ಅವರ ಮನಸ್ಸಿನಲ್ಲಿ ಹಿಂದೂ ವಿರೋಧಿ ಅಜೆಂಡಾವನ್ನು ಹಾಕುವ ಮೂಲಕ ಬ್ರೈನ್‌ವಾಶ್ ಮಾಡುವುದು ಅವರ ಧ್ಯೇಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!