ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ (Australia) ತಂಡವು ನ್ಯೂಜಿಲೆಂಡ್ (New Zealand) ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದೆ.
ಕೊನೆಯ 6 ಎಸೆತಗಳಲ್ಲಿ ಕಿವೀಸ್ ಗೆಲುವಿಗೆ 19 ರನ್ ಬೇಕಿತ್ತು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ ಕ್ರೀಸ್‌ನಲ್ಲಿದ್ದರು.
ಮೊದಲ ಎಸೆತವನ್ನು ಜೇಮ್ಸ್ ನೀಶಮ್‌ಗೆ (James Neesham) ಸಿಂಗಲ್ಸ್ ತಂದುಕೊಟ್ಟರು. ಆದ್ರೆ 2ನೇ ಎಸೆತದಲ್ಲೇ ಸ್ಟಾರ್ಕ್ ವೈಡ್‌ನೊಂದಿಗೆ ಬೌಂಡರಿ ಸೇರಿ 5 ರನ್ ಬಿಟ್ಟುಕೊಟ್ಟರು. ಮುಂದಿನ ಮೂರು ಎಸೆತಗಳಲ್ಲೂ ಕಿವೀಸ್ ತಂಡಕ್ಕೆ ತಲಾ 2 ರನ್ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಜೇಮ್ಸ್ ಎರಡು ರನ್ ಖದಿಯಲು ಯತ್ನಿಸಿ 1 ರನ್ ಕಲೆಹಾಕಿದರು. 2ನೇ ರನ್ ಖದಿಯಲು ಯತ್ನಿಸಿದ ಜೇಮ್ಸ್ ರನೌಟ್‌ಗೆ ತುತ್ತಾದರು. ಕೊನೆಯ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ ಕಿವೀಸ್ ವಿರೋಚಿತ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ತಂಡವು 49.2 ಓವರ್‌ಗಳಿಗೆ 388 ರನ್‌ಗಳಿಗೆ ಆಲೌಟ್ ಆಯಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿ ವಿರೋಚಿತ ಸೋಲಿಗೆ ತುತ್ತಾಯಿತು.
ಕಿವೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ 3ನೇ ವಿಕೆಟ್‌ಗೆ ಡೇರಿಲ್ ಮಿಚೆಲ್ (Daryl Mitchell) ಹಾಗೂ ರಚಿನ್ ರವೀಂದ್ರ (Rachin Ravindra) ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿತ್ತು. ಲಾಥಮ್ ಹಾಗೂ ರವೀಂದ್ರ ಜೋಡಿ 44 ಎಸೆತಗಳಲ್ಲಿ 54 ರನ್, ಫಿಲಿಪ್ಸ್ ಹಾಗೂ ರವೀಂದ್ರ ಜೋಡಿ 34 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿದರು. ಒಂದೆಡೆ ರನ್ ಕಲೆಹಾಕುತ್ತಿದ್ದ ಕಿವೀಸ್ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು, ಇದು ತಂಡದ ಸೋಲಿಗೆ ಕಾರಣವಾಯಿತು.
ಕಿವೀಸ್ ಪರ ಡಿವೋನ್ ಕಾನ್ವೆ 28 ರನ್, ವಿಲ್ ಯಂಗ್ 32 ರನ್ ಗಳಿಸಿದ್ರೆ, ರಚಿನ್ ರವೀಂದ್ರ 116 ರನ್ (89 ಎಸೆತ, 5 ಸಿಕ್ಸರ್, 9 ಬೌಂಡರಿ) ಸಿಡಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್ ಒಂದೇ ಟೂರ್ನಿಯಲ್ಲಿ ಕಿವೀಸ್ ಪರ ಎರಡು ಶತಕ ಸಿಡಿಸಿದ ದಿಗ್ಗಜರ ಎಲೈಟ್ ಪಟ್ಟಿ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ 51 ಎಸೆತಗಳಲ್ಲಿ 54 ರನ್ (1 ಸಿಕ್ಸರ್, 6 ಬೌಂಡರಿ) ಚಚ್ಚಿ ಔಟಾದರು. ಆ ನಂತ್ರ ಟಾಮ್ ಲಾಥಮ್ 21 ರನ್, ಗ್ಲೇನ್ ಫಿಲಿಪ್ಸ್ 12 ರನ್, ಮಿಚೆಲ್ ಸ್ಯಾಂಟ್ನರ್ 17 ರನ್, ಮ್ಯಾಟ್ ಹೆನ್ರಿ 9 ರನ್ ಗಳಿಸಿದ್ರೆ, ಜೇಮ್ಸ್ ನೀಶಮ್ 39 ಎಸೆತಗಳಲ್ಲಿ 51 ರನ್ (3 ಸಿಕ್ಸರ್, 3 ಬೌಂಡರಿ) ಗಳಿಸಿದರೆ, ಟ್ರೆಂಟ್ ಬೌಲ್ಟ್ 10 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.