ಹೊಸದಿಗಂತ ಮಂಗಳೂರು:
ಬಾವಿಗೆ ಬಿದ್ದ ಬಾಲಕನನ್ನು ಮೇಲೆತ್ತಲು ಹೋದ ಯುವಕನೋರ್ವ ಬಾಲಕನೊಂದಿಗೇ ಬಾವಿಯಲ್ಲಿ ಸಿಲುಕಿ ಫಜೀತಿಪಟ್ಟ ಘಟನೆ ಉಡುಪಿ ಜಿಲ್ಲೆಯ ಕಿನ್ನಿಮೂಲ್ಕಿ ಕಾರ್ಮಿಕರ ಕಾಲನಿಯಲ್ಲಿ ನಡೆದಿದೆ.
ಇಲ್ಲಿನ ಬಾಲಕನೋರ್ವ ಆಕಸ್ಮಿಕವಾಗಿ 35 ಅಡಿ ಆಳದ ಬಾವಿಗೆ ಬಿದ್ದಿದ್ದ. ಈತನನ್ನು ರಕ್ಷಿಸಲು ಯುವಕನೋರ್ವ ಬಾವಿಗೆ ಹಾರಿದ್ದು, ಇಬ್ಬರಿಗೂ ಮೇಲಕ್ಕೆ ಬರಲಾದ ಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಸಿಬ್ಬಂದಿಗಳು ಇಬ್ಬರನ್ನೂ ರಕ್ಷಿಸಿ ಮೇಲಕ್ಕೆತ್ತಿದ್ದಾರೆ.