ಹೊಸದಿಗಂತ ಹಾಸನ :
ಕೆರೆ ಮೀನು ತಿಂದು ಇಬ್ಬರು ಸಾವನ್ನಪ್ಪಿರುವ ಹಾಗೂ ಹದಿನೈದಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.
ರವಿಕುಮಾರ (46), ಪುಟ್ಟಮ್ಮ 50) ಮೃತ ದುರ್ದೈವಿಗಳು. ನೀರಿಲ್ಲದೆ ಬತ್ತಿ ಹೋಗಿದ್ದ ಬಸವನಹಳ್ಳಿ ಗ್ರಾಮದ ಕೆರೆಯಲ್ಲಿ ಕೆಸರಿನಲ್ಲಿದ್ದ ಮೀನನ್ನು ಗ್ರಾಮಸ್ಥರು ಹಿಡಿದಿದ್ದರು. ಮೀನುಗಳನ್ನು ಹಿಡಿದು ಅಡುಗೆ ಮಾಡಿ ಊಟ ಮಾಡಿದ ನಂತರ ಹದಿನೈದಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಬಸವಹಳ್ಳಿ ಗ್ರಾಮದ ರವಿಕುಮಾರ, ಕೆ.ಆರ್.ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ ಮೃತಪಟ್ಟಿದ್ದು, ಪುಟ್ಟಮ್ಮ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸನ್ಯಾಸಿಪುರದವರು. ತಾಯಿ ಮನೆಗೆ ಪುಟ್ಟಮ್ಮ ಬಂದಿದ್ದು, ಕೆರೆಯ ಮೀನು ತಿಂದು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದರೆ ಇನ್ನೂ ಕೆಲವರು ವಿವಿಧ ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಮರೋಣತ್ತರ ಪರೀಕ್ಷೆ ನಡೆದ ನಂತರ ಸಾವಿಗೆ ಅಸಲಿ ಕಾರಣ ಎನೆಂದು ತಿಳಲಿದೆ.
ಅಸ್ವಸ್ಥರು ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಿದ್ದು, ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.