ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್‌ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಸ್ಯಾನ್ ಫ್ರಾನ್ಸಸ್ ಇಸ್ಕೋದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್‌ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೇತುವೆಯಿಂದ ಬಾಲಕ ಹಾರಿದ್ದನ್ನು ಪಾದಯಾತ್ರಿಗಳು ಗಮನಿಸಿ ವಿಚಾರ ತಿಳಿಸಿದ್ದಾರೆ. ನಂತರ ಕಾರ್ಯಾಚರಣೆ ಶುರುಮಾಡಲಾಗಿತ್ತು. ಎರಡು ಗಂಟೆಗಳ ಶೋಧ ಕಾರ್ಯದ ನಂತರ ಮೃತದೇಹ ಪತ್ತೆಯಾಗಿದೆ.

12 ನೇ ತರಗತಿ ಓದುತ್ತಿದ್ದ ಬಾಲಕನ ಬ್ಯಾಗ್, ಸೈಕಲ್ ಹಾಗೂ ಫೋನ್ ಸೇತುವೆ ಬಳಿ ಪತ್ತೆಯಾಗಿದೆ. ಈ ವರ್ಷದಲ್ಲಿ ಇದೇ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ೨೫, ಈವರೆಗೆ ಸುಮಾರು ಎರಡು ಸಾವಿರ ಮಂದಿ ಇಲ್ಲಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!