ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಟ್ವಿಟರ್‌ನಲ್ಲಿ Boycott Cadbury ಟ್ರೆಂಡಿಂಗ್ ಆಗಿದ್ದು, ಕ್ಯಾಡ್ಬರಿ ಉತ್ಪನ್ನಗಳಲ್ಲಿ ‘ಗೋಮಾಂಸ’ ಬಳಸಲಾಗುತ್ತಿದೆ ಎಂಬ ವದಂತಿ ಜತೆಗೆ ಕಂಪನಿಯ ಇತ್ತೀಚಿನ ದೀಪಾವಳಿ ಜಾಹೀರಾತನ್ನು ಗುರಿಯಾಗಿಸಿಕೊಂಡಿದ್ದಾರೆ.
ಕ್ಯಾಡ್ಬರಿ ಜಾಹೀರಾತನಲ್ಲಿ ಬಡ ದೀಪ ಮಾರಾಟಗಾರನ ಹೆಸರು ‘ದಾಮೋದರ್’ ಎಂದು ಬಳಸುವುದನ್ನು ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಆಕ್ಷೇಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಲೇವಡಿ ಮಾಡುವುದಕ್ಕೆ ಇದನ್ನು ಈ ರೀತಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
“ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ” ಎಂದು ಸಾಧ್ವಿ ಪ್ರಾಚಿ ಟ್ವೀಟ್ ಮಾಡಿದ್ದು, ಭಾರತದಲ್ಲಿ ಕ್ಯಾಡ್ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅನೇಕರು ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ.
Have you carefully observed Cadbury chocolate's advertisement on TV channels?
The shopless poor lamp seller is Damodar.This is done to show someone with PM Narendra Modi's father's name in poor light. Chaiwale ka baap diyewala.
Shame on cadbury Company #BoycottCadbury pic.twitter.com/QvzbmOMcX2
— Dr. Prachi Sadhvi (@Sadhvi_prachi) October 30, 2022
ಕ್ಯಾಡ್ಬರಿ ವಿರುದ್ಧ 2021 ರಲ್ಲಿ ನಾನ್ ವೆಜ್ ಎಂದು, ಬಹಿಷ್ಕಾರದ ಕರೆಯನ್ನು ನೀಡಲಾಯಿತು. ಆದರೆ ಭಾರತದಲ್ಲಿನ ತನ್ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ, ಪ್ಯಾಕೆಟ್ ಮೇಲಿರುವ ಹಸಿರು ಚುಕ್ಕಿ ಅದನ್ನು ತೋರಿಸುತ್ತದೆ ಎಂದು ಪ್ರಸ್ತುತ ಕಂಪನಿ ಹೇಳಿಕೆ ನೀಡಿತ್ತು.