ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಲ್ಲಿ ವೃದ್ದೆಯೊಬ್ಬರ ಸಾವಿನ ಸತ್ಯ ಬಯಲಿಗೆ ಬಂದಿದೆ. ಕಳೆದ ಮಾರ್ಚ್ 5 ರಂದು ವೃದ್ದೆಯ ಸಾವಾಗಿತ್ತು. ಆದರೆ ಮಗ ತಾಯಿಯ ಸಾವಿನ ಕುರಿತು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಆಗಿದೆ. ಏಕೆಂದರೆ ವೃದ್ದೆಯ ಸ್ನೇಹಿತೆನೆ ಆಕೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೊಟ್ಟ ಸಾಲ ವಾಪಸ್ ಕೇಳಲು ಹೋಗಿದ್ದಕ್ಕೆ ಸ್ನೇಹಿತೆಯಿಂದಲೇ ವೃದ್ದೆ ಕೊಲೆಯಾಗಿರುವಂತಹ ಘಟನೆ ಮೈಸೂರಿನ ಕೆಸಿ.ಬಡಾವಣೆಯಲ್ಲಿ ನಡೆದಿದೆ.
ಸುಲೋಚನಾ (62) ಎಂಬುವವರನ್ನು ಅದೇ ಬಡವಾಣೆ ನಿವಾಸಿ ಶಕುಂತಲಾ (42) ಕೊಲೆ ಮಾಡಿದ್ದಾರೆ.
ಉಸಿರುಗಟ್ಟಿಸಿ ಕೊಂದು, ಬಳಿಕ ಸ್ನೇಹಿತೆ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಶಕುಂತಲಾ ನಾಟಕವಾಡಿದ್ದಾರೆ. ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದ್ದು, ಸದ್ಯ ಅವರನ್ನು ಅರೆಸ್ಟ್ ಮಾಡಲಾಗಿದೆ. ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಮೃತ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣ ಪತ್ನಿ. ಶಂಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿದ್ದರು. ಸಾಲದ ಸುಳಿಯಲ್ಲಿ ಸಿಲುಕಿ ತೀರಿಸಲು ಆಗದಿದ್ದಾಗ ಇಂತಹ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಹೋದರೆಂದು ಶಕುಂತಲಾ, ಸುತ್ತಲ ಮನೆಯವರನ್ನ ನಂಬಿಸಿದ್ದಾರೆ. ಇನ್ನು ಮೃತದೇಹದ ಮೇಲಿದ್ದ ಚಿನ್ನದ ಸರವನ್ನು ಶಂಕುಂತಲಾ ಕದಿದ್ದು, 1.5 ಲಕ್ಷ ರೂ ಗಿರವಿ ಇಟ್ಟಿದ್ದರು. ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಎದೆ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆ ಶಕುಂತಲಾ ಒಪ್ಪಿಕೊಂಡಿದ್ದಾರೆ. ಮೃತ ಸುಲೋಚನ ಸುಮಾರು ಎರಡುವರೆ ಲಕ್ಷ ರೂ ಸಾಲ ನೀಡಿದ್ದು, ಮಾ.5 ರಂದು ಕೊಟ್ಟ ಸಾಲ ಕೇಳಲು ಮನೆಗೆ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ನಂತರ ಶಕುಂತಲಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.