ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ತಾಯಿ-ಮಗ: ರಕ್ಷಿಸಿದ ಮಹಿಳಾ ಪೊಲೀಸ್‌, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಯ ಜಾಗರೂಕತೆಯಿಂದಾಗಿ ಪಶ್ಚಿಮ ಬಂಗಾಳದ ಬಂಕುರಾ ರೈಲು ನಿಲ್ದಾಣದಲ್ಲಿ ವೃದ್ಧ ಮಹಿಳೆ ಮತ್ತು ಆಕೆಯ ಮಗನ ಜೀವವನ್ನು ಉಳಿಸಿದೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ವೃದ್ಧ ತಾಯಿ ಮಗು ಮಗ ಇಬ್ಬರೂ ಕಾಲು ಜಾರಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಮಹಿಳಾ ಪೊಲೀಸ್‌ ಕೂಡಲೇ ಓಡಿಹೋಗಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ರೈಲ್ವೆ ಸಚಿವಾಲಯ ಸೋಮವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.  ತನ್ನ ಟ್ವೀಟ್‌ನಲ್ಲಿ ಸಚಿವಾಲಯವು ಮಹಿಳಾ ಪೊಲೀಸರನ್ನು ಶ್ಲಾಘಿಸಿದೆ.

ಚಲಿಸುತ್ತಿರುವ ರೈಲಿನಲ್ಲಿ ಇಳಿಯದಂತೆ ಅಥವಾ ಹತ್ತದಂತೆ ಪ್ರಯಾಣಿಕರಿಗೆ ತಿಳಿಸಲಾಗಿದೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಾಗಿನಿಂದ 28,000 ಕ್ಕೂ ಹೆಚ್ಚು ವೀಕ್ಷಣೆ ದೊರೆತಿದೆ. ಇಂತಹ ದುರ್ಘಟನೆ ನಡೆಯದಂತೆ ಸ್ವಯಂಚಾಲಿತ ಬಾಗಿಲು ಇಡುವಂತೆ ಪ್ರಯಾಣಿಕರು ಇಲಾಖೆಗೆ ಮನವಿ ಮಾಡದ್ದಾರೆ. ಮಹಿಳಾ ಪೊಲೀಸ್‌ ಧೈರ್ಯಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!