ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ಇಂದಿನಿಂದ ಐದು ದಿನಗಳು ರಾಷ್ಟ್ರೀಯ ಯುವಜನೋತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಅಪರಿಚಿತ ಕಾರೊಂದು ಪತ್ತೆಯಾಗಿದ್ದು, ಅನುಮಾನದಿಂದ ಸಂಚಾರಿ ಠಾಣೆ ಪೊಲೀಸರು ಕಾರನ್ನು ತಕ್ಷಣವೇ ಜಪ್ತಿ ಮಾಡಿದ್ದಾರೆ. ಕಾರ್ಯಕ್ರಮದ ಹಿನ್ನೆಲೆ ಪ್ರಧಾನಿ ಮೋದಿ ಅವರು ಸಂಚರಿಸುತ್ತಿರುವ ರಸ್ತೆ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.
ಆದರೆ ಎರಡು ದಿನಗಳಿಂದ ಹೊಸೂರು ಕ್ರಾಸ್ ಬಳಿ ಮಹಾರಾಷ್ಟ್ರದ ಎಂಎಚ್ 10, ಸಿಎ 6984 ನೋಂದಣಿ ಕಾರು ನಿಂತಿದ್ದು, ಉತ್ತರ ವಲಯ ಸಂಚಾರಿ ಠಾಣೆ ಟ್ರಾಫಿಕ್ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.