ಹುಷಾರಿಲ್ಲದ ತಾಯಿಗೆ ಎಳನೀರು ಕೀಳಲು ಹೋಗಿ ಕಾಲು ಜಾರಿ ಬಿದ್ದು ಮಗ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅನಾರೋಗ್ಯದಲ್ಲಿದ್ದ ತಾಯಿಗೆ ಎಳನೀರು ತರಲು ಮರ ಏರಿದ್ದ ಮಗ ಕಾಲುಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ಈ ದುರಾದೃಷ್ಟಕರ ಘಟನೆ ಕೆ.ಆರ್ ನಗರದ ಮುಂಜನಹಳ್ಳಿಯಲ್ಲಿ ನಡೆದಿದೆ. ಎಳನೀರು ಕೀಳುವ ವೇಳೆ ಅವಘಡ ಸಂಭವಿಸಿದೆ. ಚೇತನ್ (27) ಮೃತ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ಎಳನೀರು ಕೀಳುವ ವೇಳೆ ಕಾಲು ಜಾರಿ ಚೇತನ್ ಬಿದ್ದು ಮೃತಪಟ್ಟಿದ್ದಾನೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!