ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಕೇಂದ್ರದ ವಸ್ತುಸ್ಥಿತಿ ಮತ್ತು ಸವಾಲುಗಳನ್ನು ಅಂದಾಜಿಸುವ ಅನಲಾಗ್ ಕಾರ್ಯಾಚರಣೆ ಲಡಾಖ್‌ನ ಲೇಹ್‌ನಲ್ಲಿ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ತಿಳಿಸಿದೆ.
ಅನಲಾಗ್ ಕಾರ್ಯಾಚರಣೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, ‘ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಯೋಜನೆ’ ಲೇಹ್‌ನಲ್ಲಿ ಪ್ರಾರಂಭವಾಗಿದೆ.ಈ ಕಾರ್ಯವಿಧಾನದ ಮೂಲಕ ಭೂಮಿಯ ಹೊರತಾಗಿ ಕಕ್ಷೆಯಲ್ಲಿರುವ ಕೇಂದ್ರದ ಸ್ಥಿತಿ ಹಾಗೂ ಎದುರಾಗಬಹುದಾದ ಸವಾಲುಗಳ ಅಧ್ಯಯನ ನಡೆಯಲಿದೆ’ ಎಂದು ಮಾಹಿತಿಯನ್ನು ಹಂಚಿಕೊಂಡಿದೆ.
ಇಸ್ರೊದ ಮಾನವ ಬಾಹ್ಯಾಕಾಶಯಾನ ಕೇಂದ್ರ, ಲಡಾಖ್ ಯೂನಿವರ್ಸಿಟಿಯ ಎಎಕೆಎ ಬಾಹ್ಯಾಕಾಶ ಸ್ಟುಡಿಯೊ ಮತ್ತು ಬಾಂಬೆ ಐಐಟಿ ಸಹಯೋಗದಲ್ಲಿ ಈ ಕಾರ್ಯವಿಧಾನ ನಡೆಯುತ್ತಿದೆ.