ಅನಮೋಡ ಘಟ್ಟ ಕುಸಿತ ಗೋವಾ ಅನಮೋಡ ರಸ್ತೆ ತಾತ್ಕಾಲಿಕ ಸ್ಥಗಿತ

ಹೊಸದಿಗಂತ ವರದಿ ಜೋಯಿಡಾ:

ಜೋಯಿಡಾ ತಾಲೂಕಿನ ಗಡಿ ಭಾಗವಾದ ಅನಮೋಡ ಘಟ್ಟದ ಬಳಿ ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿದು ಗೋವಾ – ಅನಮೋಡ ರಾಷ್ಟ್ರೀಯ ಹೆದ್ದಾರಿ ಸಧ್ಯ ಸ್ಥಗಿತಗೊಂಡಿದೆ.
ಗೋವಾ ಗಡಿಯಲ್ಲಿ ಗುಡ್ಡ ಕುಸಿದ್ದಿದ್ದು ಸಧ್ಯ ಗುಡ್ಡ ತೆರವು ಕಾರ್ಯ ನಡೆಸಲಾಗುತ್ದ್ದುತಿ ವಾಹನಗಳನ್ನು ಈ ರಸ್ತೆಯಲ್ಲಿ ಬಿಡುತ್ತಿಲ್ಲ, ಗೋವಾಕ್ಕೆ ಸಾಗಲು ಸಾಕಷ್ಟು ವಾಹನಗಳು ಇದೆ ರಸ್ತೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದ್ದು ಗುಡ್ಡ ಕುಸಿತದಿಂದಾಗಿ ರಸ್ತೆ ಯಲ್ಲಿ ದೊಡ್ಡ ದೊಡ್ಡ ಕಲ್ಲು ಮತ್ತು ಮಣ್ಣು ತುಂಬಿಕೊಂಡಿದ್ದು ಜೆಸಿಬಿ ಗಳನ್ನು ಬಳಸಿ ರಸ್ತೆ ಖುಲ್ಲಾ ಮಾಡಲಾಗುತ್ತಿದೆ.
ಹೆಚ್ಚಿನ ಮಳೆಯಾದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದ್ದು ಅಣಶಿ ಭಾಗದಲ್ಲು ಗುಡ್ಡ ಕುಸಿತ ಸಂಭವಿಸಿದೆ.
ಮಳೆಗಾಲದಲ್ಲಿ ಜೋಯಿಡಾ ತಾಲೂಕಿನ ಹಲವೆಡೆ ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು ತಾಲೂಕಿನ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿ ಜನರ ಕಷ್ಟಕ್ಕೆ ನೆರವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!