Saturday, April 1, 2023

Latest Posts

ರಾಮ್‌ ಚರಣ್ ಜೊತೆ `ನಾಟು ನಾಟು’ಸಾಂಗ್ ಗೆ ಸ್ಟೆಪ್ ಹಾಕಿದ ಆನಂದ್ ಮಹೇಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

`ಆರ್‌ಆರ್‌ಆರ್’ (RRR) ಚಿತ್ರದ `ನಾಟು ನಾಟು’ (Naatu Naatu) ಸಾಂಗ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಎಲ್ಲರ ಬಾಯಲ್ಲೂ `ನಾಟು ನಾಟು ಸಾಂಗ್ ಕೇಳುತ್ತಿರುತ್ತದೆ.
ಇದೀಗ ಆನಂದ್ ಮಹಿಂದ್ರಾ (Anand Mahindra) ಅವರು ಸಹ ನಾಟು ನಾಟು ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.
ವಿಶೇಷ ಅಂದ್ರೆ ಸಾಂಗ್ ಸ್ಟೆಪ್ ಅನ್ನು ರಾಮ್‌ ಚರಣ್ (Ram Charan) ಅವರೇ ಹೇಳಿಕೊಟ್ಟಿದ್ದಾರೆ. ಇದರ ವಿಡಿಯೋ ಸ್ವತಃ ಆನಂದ್ ಮಹೇಂದ್ರಾ ಅವರೇ ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಇ-ಪ್ರಿಕ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ನೃತ್ಯ ಮಾಡಿ ನಂತರ ಪರಸ್ಪರ ಅಪ್ಪಿಕೊಂಡಿರುವುದು ಈ ವಿಡಿಯೋದಲ್ಲಿದಲ್ಲಿದೆ.

ಹೈದರಾಬಾದ್ ಪ್ರಿಕ್ಸ್ ನಲ್ಲಿ ನಟ ರಾಮ್ ಚರಣ್ ಅವರಿಂದ `ನಾಟು ನಾಟು’ ಹಾಡಿನ ಬೇಸಿಕ್ ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ಟ್ವಿಟ್ಟರ್​ನಲ್ಲಿ ರಾಮ್ ಚರಣ್​ಗೆ ವಿಶ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!