ಏಕಕಾಲಕ್ಕೆ 15ಪೆನ್ನುಗಳಲ್ಲಿ 15 ದೇಶಭಕ್ತರ ಚಿತ್ರ ಬಿಡಿಸಿದ ಬಾಲಕಿ: ಅದ್ಭುತ ಪ್ರತಿಭೆಗೆ ಆನಂದ್ ಮಹೀಂದ್ರಾ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಕಕಾಲಕ್ಕೆ 15 ಪೆನ್ನುಗಳಿಂದ 15 ದೇಶಭಕ್ತರ ಚಿತ್ರಗಳನ್ನು ಬಿಡಿಸಿದ ಹುಡುಗಿಯ ಪ್ರತಿಭೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮಾರುಹೋಗಿದ್ದಾರೆ. ತನ್ನ ಚಿತ್ರಕಲೆ ಪ್ರತಿಭೆಯಿಂದ ಗಿನ್ನಿಸ್ ದಾಖಲೆ ಬರೆದ ಬಾಲಕಿಯ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಈ ಹುಡುಗಿಯ ಪ್ರತಿಭೆ ಯಾರನ್ನಾದರೂ ಬೆರಗುಗೊಳಿಸದೆ ಇರಲಾರದು. ಆಕೆಯ ಕೈ ಚಲನೆಯಿಂದ 15 ಪೆನ್ನುಗಳಿಂದ 15ದೇಶ ಭಕ್ತರ ಫೋಟೋಗಳನ್ನು ಬಿಡಿಸಿದ ರೀತಿ ಅಚ್ಚರಿ ಮೂಡಿಸುತ್ತದೆ. ಇದು ನಿಜವಾಗಿ ಹೇಗೆ ಸಾಧ್ಯ?ಆಕೆ ನುರಿತ ಕಲಾವಿದೆಯಾದರೂ ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಚಿತ್ರಿಸುವುದು ಕಲೆಗಿಂತ ದೊಡ್ಡ ಪವಾಡ. ಇದು ನಿಜವೆಂದು ಅಲ್ಲಿರುವ ಯಾರಾದರೂ ದೃಢಪಡಿಸಿದರೆ ಆ ಬಾಲಕಿಗೆ ವಿದ್ಯಾರ್ಥಿವೇತನ ಮತ್ತು ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಬಾಲಕಿಯ ಪ್ರತಿಭೆಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕೆಲವು ಬಳಕೆದಾರರು ಹುಡುಗಿಯ ಪ್ರತಿಭೆಯನ್ನು ನಂಬಲು ಸಾಧ್ಯವಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!