ಈ ಬಾರಿ ಆನಂದ್ ಕಣ್ಣಿಗೆ ಬಿತ್ತು ಬದುಕಿನ ಕ್ಷಣಗಳಿಗೆ ಆನಂದ ನೀಡುವ ಸ್ಪೆಷಲ್ ಸ್ಕೂಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುತೂಹಲಕಾರಿ ಸಂಗತಿ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಆಗಾಗ ಅಚ್ಚರಿ ಮೂಡಿಸುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಉದ್ಯಮಿ ಆನಂದ ಮಹೀಂದ್ರಾ ಕಣ್ಣಿಗೆ ಈ ಬಾರಿ ಸ್ಕೂಟರೊಂದು ಬಿದ್ದಿದೆ! ಏನಪ್ಪಾ ವಿಶೇಷ ಅಂದ್ರಾ… ಇದು ಅಂತಿಂಥಾ ಸ್ಕೂಟರಲ್ಲ ಯಾವುದೋ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ ಸ್ಕೂಟರ್‌ ಎಲ್ಲರ ಕಣ್ಣುಗಳನ್ನು ಸೆಳೆಯುವಂತಿತ್ತು. ಈ ಸ್ಕೂಟರ್‌ಗೆ ಚಿಕ್ಕ ಚಿಕ್ಕ ದೀಪಗಳನ್ನು ಅಳವಡಿಸಿದ್ದು, ಮುಂಭಾಗದಲ್ಲಿ ಟ್ಯಾಬ್ ಕೂಡ ಇದೆ. ಸ್ಕೂಟರ್ ಸವಾರಿ ಮಾಡುತ್ತಾ ಚಲನಚಿತ್ರಗಳು ಮತ್ತು ವೀಡಿಯೊಗಳನ್ನು ಈ ಟ್ಯಾಬ್‌ನಲ್ಲಿ ವೀಕ್ಷಿಸಬಹುದು.

ಜೀವನ ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯಾಗಿದೆ ಎಂದು ಶೀರ್ಷಿಕೆ ಕೂಡ ನೀಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಮೂರು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹಲವರು ಟ್ಯಾಲೆಂಟ್‌ ಎಂದು, ನಮ್ಮ ಬಜಾಜ್‌ ಚೇತಕ್‌ ಎಂದು ನೆಟ್ಟಿಗರು ಟ್ವಿಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!