ʻಟೀಂ ವರ್ಕ್‌ʼ ಕುರಿತು ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿರುವ ವಿಡಿಯೋ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಂದು ಹಕ್ಕಿ ಮಣ್ಣನ್ನು ಅಗೆದು ಹೊರಗೆ ಸುರಿಯುತ್ತಿದ್ದರೆ, ಇನ್ನೊಂದು ಮಣ್ಣನ್ನು ಗುಂಡಿಗೆ ಸುರಿಯುತ್ತಿದೆ. ಈ ಅವಳಿ ಹಕ್ಕಿಗಳ ಕೆಲಸವನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಏನಿದೆ ಅಂತ ಎಲ್ಲರೂ ಯೋಚಿಸಬಹುದು. ಇದು ಕೇವಲ ಕಾಲಕ್ಷೇಪವಲ್ಲ. ಮಾಹಿತಿ, ಜ್ಞಾನ ಮತ್ತು ಮನರಂಜನೆಯನ್ನು ಒಳಗೊಂಡಿದೆ. ಯಾರಿಗೂ ತಿಳಿಯದ ವಿಷಯಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಆನಂದ್‌ ಮಹೀಂದ್ರಾ ಹಂಚಿಕೊಳ್ಳುತ್ತಾರೆ. ಟೀಮ್ ವರ್ಕ್ ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿದ್ದಾರೆ.

ಈ ವೀಡಿಯೊದಲ್ಲಿ, ಹಕ್ಕಿಯೊಂದು ತನ್ನ ಕಾಲುಗಳಿಂದ ಮರಳನ್ನು ಮೇಲಕ್ಕೆ ಎತ್ತುವ ಮೂಲಕ ಗುಂಡಿ ಅಗೆಯುತ್ತಿದ್ದರೆ, ಇನ್ನೊಂದು ಹಕ್ಕಿ ಅದನ್ನು ಮುಚ್ಚಿತ್ತಿದೆ. ಇದನ್ನು ಶೀರ್ಷಿಕೆ ನೀಡಿರುವ ಮಹೀಂದ್ರಾ ಟೀಮ್ ವರ್ಕ್ ಹೀಗಾಗಬಾರದು. “ಕೆಲವು ಸಂದರ್ಭಗಳಲ್ಲಿ ನೀವು ಯೋಜನೆಯ ಮಧ್ಯದಲ್ಲಿ ಕೆಲಸ ಮಾಡುತ್ತೀರಿ. ಆಗ ನೀವೆಲ್ಲರೂ ಒಂದೇ ಗುರಿಯತ್ತ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಮರೆಯದಿರಿ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಇದು ನಿಜವಾಗಿ ಸಂಭವಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!