Thursday, June 1, 2023

Latest Posts

VIRAL VIDEO| ಮಕ್ಕಳ ರಕ್ಷಣೆಗಾಗಿ ಹೊಸ ಸ್ವಿಮ್‌ ಸೂಟ್ ಆವಿಷ್ಕಾರಕ್ಕೆ ಆನಂದ್ ಮಹೀಂದ್ರಾ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನದಿ, ಕೆರೆ, ಹಳ್ಳ-ಕೊಳ್ಳಗಳಲ್ಲಿ ಈಜುವುದು ಸುಲಭದ ಮಾತಲ್ಲ, ಅದೃಷ್ಟ ಕೈಕೊಟ್ಟರೆ ಈಜು ಬರುವವರೂ ಕೂಡ ಪ್ರಾಣ ಕಳೆದುಕೊಂಡಿರುವ ಘಟನೆಗಳನ್ನು ನೋಡಿದ್ದೇವೆ. ಅಂತವರಿಗಾಗಿ ವಿಶೇಷವಾಗಿ ಮಾರುಕಟ್ಟೆಗೆ ಬಂದಿರುವ ಸ್ವಿಮ್ ಸೂಟ್ ವಿಡಿಯೋ ನೋಡಿ ಟೆಕ್ ದಿಗ್ಗಜ ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಈ ಟ್ವೀಟ್ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ನೆನಪಿಸಿದೆ. ಆನಂದ್ ಮಹೀಂದ್ರಾ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಮಕ್ಕಳಿಗಾಗಿ ಹೊಸ ಸ್ವಿಮ್ ಸೂಟ್ ಅನ್ನು ಪರಿಚಯಿಸಿದ್ದಾರೆ. ಅದನ್ನು ಧರಿಸಿ ಅವರು ಕೊಳಕ್ಕೆ ಇಳಿದರೂ ಆ ವಸ್ತ್ರ ರಕ್ಷಣಾ ಕವಚವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಈ ಸ್ವಿಮ್ ಸೂಟ್‌ನಿಂದ ಆನಂದ್ ಮಹೀಂದ್ರಾ ಆಕರ್ಷಿತರಾಗಿದ್ದಾರೆ. ತಕ್ಷಣವೇ ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದು ನೊಬೆಲ್ ಪ್ರಶಸ್ತಿಯನ್ನು ಗೆಲ್ಲದಿದ್ದರೂ ಸಹ ಒಂದು ದೊಡ್ಡ ಆವಿಷ್ಕಾರವಾಗಿದೆ. ಯಾಕೆಂದರೆ ಇಬ್ಬರು ಚಿಕ್ಕ ಮಕ್ಕಳ ಅಜ್ಜನಾದ ನನಗೆ ಅವರ ಯೋಗಕ್ಷೇಮ ಮತ್ತು ಸುರಕ್ಷತೆ ಮುಖ್ಯ’ ಎಂದು ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ‘ಅದ್ಭುತ’ ಮತ್ತು ‘ನೀವು ತುಂಬಾ ಕಾಳಜಿ ವಹಿಸುವ ಅಜ್ಜ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

https://twitter.com/i/status/1661685939276750849

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!