ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆ ಹೊರಟಿದ್ದಾರೆ.
ದೈವಭಕ್ತರೂ ಆಗಿರುವ ಅನಂತ್, ಗುಜರಾತ್‌ನ ಜಾಮ್‌ನಗರದಿಂದ ದೇವಭೂಮಿ ದ್ವಾರಕಾಕ್ಕೆ 141 ಕಿ.ಮೀ ಪಾದಯಾತ್ರೆ ಹೊರಟಿದ್ದಾರೆ. ಸದ್ಯ ಅವರು ದ್ವಾರಕಾದ ಸನಿಹ ಇದ್ದಾರೆ. ಮುಂದಿನ ನಾಲ್ಕೈದು ದಿನದಲ್ಲಿ ಅವರು ದ್ವಾರಕಾ ತಲುಪಲಿದ್ದಾರೆ.
ಏಪ್ರಿಲ್ 10 ರಂದು ಅನಂತ್ ಅವರ ಜನ್ಮದಿನವಿದ್ದು ಆ ಪ್ರಯುಕ್ತ ಪಾದಯಾತ್ರೆ ಮೂಲಕ ದ್ವಾರಕಾ ತೆರಳಿ ಭಗವಾನ್ ಕೃಷ್ಣನ ದರ್ಶನ ಮಾಡಲಿದ್ದಾರೆ. ಅಲ್ಲದೇ ಅವರು ದ್ವಾರಕಾದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭದ್ರತೆ ಕಾರಣದಿಂದ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಅನಂತ್ ಅಂಬಾನಿ ಅವರು ರಾತ್ರಿ ಹೊತ್ತು ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.
ಕಳೆದ ಐದು ದಿನದ ಹಿಂದೆ ಜಾಮ್‌ನಗರದ ನಮ್ಮ ಮನೆಯಿಂದ ದ್ವಾರಕಾಕ್ಕೆ ಪಾದಯಾತ್ರೆ ಆರಂಭಿಸಿದ್ದೇನೆ. ಯಾವುದೇ ಕೆಲಸ ಮಾಡುವ ಮೊದಲು ನಾವು ದೇವರಲ್ಲಿ ನಂಬಿಕೆ ಇಟ್ಟರೇ ಅದು ಖಂಡಿತವಾಗಿಯೂ ಕೈಗೂಡುತ್ತದೆ. ದೇವರು ಇರುವಾಗ ಚಿಂತೆಗೆ ಜಾಗ ಇಲ್ಲ. ದ್ವಾರಕಾಧೀಶನು ನಮ್ಮನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.