ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈದುಪುರಂ ಗ್ರಾಮದಲ್ಲಿ ಶುಕ್ರವಾರ ಉಚಿತ ಗ್ಯಾಸ್ ಸಿಲಿಂಡರ್ ವಿತರಣಾ ಯೋಜನೆ ‘ದೀಪಂ-2’ ಗೆ ಚಾಲನೆ ನೀಡಿದರು.
‘ದೀಪಂ-2’ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೆ ಒಂದು ಸಿಲಿಂಡರ್ನಂತೆ ವರ್ಷಕ್ಕೆ ಮೂರು ಸಿಲಿಂಡರ್ಗಳನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ.
ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಾಯ್ಡು ನೀಡಿದ್ದ ಆರು ಭರವಸೆಗಳಲ್ಲಿ ಇದೂ ಒಂದು.
ನಾಯ್ಡು ಅವರು ಫಲಾನುಭವಿಯೊಬ್ಬರ ಮನೆಯಲ್ಲಿ ಸ್ವತಃ ಗ್ಯಾಸ್ ಒಲೆಯನ್ನು ಹಚ್ಚಿ, ಚಹಾ ತಯಾರಿಸಿ ‘ದೀಪಂ-2’ಗೆ ಚಾಲನೆ ನೀಡಿದರು. ಬಳಿಕ ಫಲಾನುಭವಿಗಳ ಕುಟುಂಬದ ಬಗ್ಗೆ ವಿಚಾರಿಸಿದರು.