Saturday, April 1, 2023

Latest Posts

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಂಧ್ರಪ್ರದೇಶ (Andhra Pradesh) ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ತೆರಳುತ್ತಿದ್ದ ವಿಶೇಷ ವಿಮಾನ ತಾಂತ್ರಿಕ ದೋಷ ದಿಂದ ತುರ್ತು ಭೂಸ್ಪರ್ಶ ಮಾಡಿದೆ.

ಜಗನ್ ದೆಹಲಿ ತೆರಳುತ್ತಿದ್ದ ವಿಅಮಾನ ಗನ್ನವರಂ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಬಳಿಕ ವಿಮಾನ ವಾಪಸ್‌ ಮರಳಿತು. ನಂತರ ಅಲ್ಲಿಂದ ಜಗನ್ ತಕ್ಷಣವೇ ತಾಡೇಪಲ್ಲಿಗೆ ಹೊರಟರು.

ನಾಳೆ ದೆಹಲಿಯಲ್ಲಿ ಎಪಿ ಹೂಡಿಕೆ ಸಮಾವೇಶದ ಪೂರ್ವಸಿದ್ಧತಾ ಸಭೆ ನಡೆಯಲಿದೆ. ಜಗನ್ ಇದರಲ್ಲಿ ಭಾಗವಹಿಸಲಿದ್ದಾರೆ. ನಿಗದಿಯಂತೆ ಇಂದು ರಾತ್ರಿ ದೆಹಲಿ ತಲುಪಿ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ನಾಳೆ ಬೆಳಗ್ಗೆ ಜಗನ್ ದೆಹಲಿಗೆ ಹೋಗುತ್ತಾರೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿ ಕಚೇರಿ ಘೋಷಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!